S Shorts

ಬೆಂಗಳೂರು ಮಹಿಳೆಯರಿಗೆ Good News: ವಾಟ್ಸಾಪ್‌ನಲ್ಲಿ ಒಂದು ಮೆಸೇಜ್ ಮಾಡಿದ್ರೆ ಸಾಕು, ನಿಮ್ಮ ಮನೆಬಾಗಿಲಿಗೆ ಬರಲಿದೆ ‘ಸಖಿ ಆಟೋ’!

ಬೆಂಗಳೂರು ಮಹಿಳೆಯರಿಗೆ Good News: ವಾಟ್ಸಾಪ್‌ನಲ್ಲಿ ಒಂದು ಮೆಸೇಜ್ ಮಾಡಿದ್ರೆ ಸಾಕು, ನಿಮ್ಮ ಮನೆಬಾಗಿಲಿಗೆ ಬರಲಿದೆ ‘ಸಖಿ ಆಟೋ’!
Author: Meghana Gowda
Posted By: Meghana Gowda
Updated: Feb 16, 2026 | 10:37 AM

ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ಮಹಿಳೆಯರ ಸುರಕ್ಷಿತ ಸಂಚಾರಕ್ಕಾಗಿ ಒಂದು ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಆಟೋಗಳಿಗಾಗಿ ಪರದಾಡುವ ಅಥವಾ ರಾತ್ರಿ ವೇಳೆ ಸಂಚರಿಸಲು ಭಯಪಡುವ ಮಹಿಳೆಯರಿಗಾಗಿಯೇ ವಿಶೇಷವಾದ ‘ಸಖಿ ಆಟೋ’ (Sakhi Auto) ಸೇವೆ ಈಗ ಅಧಿಕೃತವಾಗಿ ಚಾಲನೆಗೊಂಡಿದೆ. ಕೇವಲ ಮಹಿಳಾ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುವ ಈ ಸೇವೆ ಸುರಕ್ಷತೆಯ ದೃಷ್ಟಿಯಿಂದ ವರದಾನವಾಗಲಿದೆ.

ಏನಿದು ಸಖಿ ಆಟೋ? ಇದರ ವಿಶೇಷತೆಗಳೇನು?

  • ಬೃಹತ್ ಚಾಲನೆ: ಪ್ರಸ್ತುತ ಬೆಂಗಳೂರಿನಾದ್ಯಂತ 2,000 ಆಟೋಗಳು ಕಾರ್ಯಾಚರಣೆ ನಡೆಸುತ್ತಿವೆ.

  • ಸಮಯ: ಸದ್ಯಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ ದಿನದ 24 ಗಂಟೆಯೂ ಸೇವೆ ನೀಡುವ ಪ್ಲಾನ್ ಸಂಸ್ಥೆಗಿದೆ.

  • ಧ್ಯೇಯ: ಮಹಿಳೆಯರಿಗೆ ಯಾವುದೇ ಆತಂಕವಿಲ್ಲದೆ, ನೆಮ್ಮದಿಯ ಪ್ರಯಾಣ ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶ.

ಬುಕಿಂಗ್ ಮಾಡುವುದು ಹೇಗೆ?

ನೀವು ಬಹಳ ಸರಳವಾಗಿ ಈ ಕೆಳಗಿನ ಎರಡು ವಿಧಾನಗಳ ಮೂಲಕ ಸಖಿ ಆಟೋ ಪಡೆಯಬಹುದು:

  1. ವಾಟ್ಸಾಪ್ ಮೂಲಕ: ನಿಮ್ಮ ಮೊಬೈಲ್‌ನಿಂದ 6361933364 ಸಂಖ್ಯೆಗೆ ಮೆಸೇಜ್ ಕಳುಹಿಸುವ ಮೂಲಕ ಬುಕ್ ಮಾಡಬಹುದು.

  2. ವೆಬ್‌ಸೈಟ್: ride.sakhiwomen.in ಜಾಲತಾಣಕ್ಕೆ ಭೇಟಿ ನೀಡಿ ಆಟೋ ಕಾಯ್ದಿರಿಸಬಹುದು.

ಪ್ರಯಾಣ ದರ ಹೇಗಿದೆ?

ಸಾಮಾನ್ಯ ಆಟೋಗಳಂತೆಯೇ ದರವನ್ನು ನಿಗದಿಪಡಿಸಲಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ:

  • ಕನಿಷ್ಠ ದರ: ಮೊದಲ 2 ಕಿಲೋಮೀಟರ್‌ಗೆ 50 ರೂ.

  • ನಂತರದ ದರ: ಪ್ರತಿ ಕಿಲೋಮೀಟರ್‌ಗೆ 20 ರೂ.