ಬೆಂಗಳೂರು : ಇತ್ತೀಚೆಗೆ ನಡೆದ ಶಾಸಕರ ಡಿನ್ನರ್ ಮೀಟಿಂಗ್ (Dinner Meeting) ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ (Ex-Minister K.N. Rajanna) ಅವರು ತಮ್ಮದೇ ಶೈಲಿಯಲ್ಲಿ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿನ್ನರ್ ಮೀಟಿಂಗ್‌ನಲ್ಲಿ ನಡೆದ ಸಂಗತಿಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.
ಸಭೆಯಲ್ಲಿ ಚರ್ಚೆಯಾದ ರಾಜಕೀಯ ವಿಷಯಗಳಿಗಿಂತ ಹೆಚ್ಚಾಗಿ ಆಹಾರ ಮತ್ತು ಪಾನೀಯಗಳ ಬಗ್ಗೆ ರಾಜಣ್ಣ ಮಾತನಾಡಿದ್ದು ವಿಶೇಷವಾಗಿತ್ತು. “ನಾವು ಡಿನ್ನರ್ ಮೀಟಿಂಗ್‌ನಲ್ಲಿ 2 ಪೆಗ್ ವಿಸ್ಕಿ ಕುಡಿದ್ದೀವಿ, 2 ಪೀಸ್ ಮಾಂಸ ತಿಂದಿದ್ದೀವಿ ಹಾಗೂ 2 ಸ್ಪೂನ್ ಅನ್ನ ತಿಂದಿದ್ದೀವಿ” ಎಂದು ಅವರು ನಗುತ್ತಲೇ ಹೇಳಿದರು.
ಕೇವಲ ಊಟ-ತಿಂಡಿ ಮಾತ್ರವಲ್ಲದೆ, ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದವು ಎಂದು ಅವರು ತಿಳಿಸಿದರು. “ನಮ್ಮ ಶಾಸಕರು ಒಳ್ಳೆ ಕಲಾವಿದರಿದ್ದಾರೆ. ಅವರು ತುಂಬಾ ಚೆನ್ನಾಗಿ ಹಾಡುಗಳನ್ನು ಹಾಡಿದ್ದಾರೆ. ಕಲಾವಿದರಿಗಿರಬೇಕಾದ ಎಲ್ಲ ಗುಣಗಳು ನಮ್ಮ ಶಾಸಕರಲ್ಲಿದೆ ಎಂದು ಹೇಳಿದ್ದಾರೆ.
