S Shorts

Heart Attack | ಕಡು ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆಯಾ ಹಾರ್ಟ್ ಅಟ್ಯಾಕ್ ಅಪಾಯ? ತಜ್ಞರು ಹೇಳುವುದೇನು?

Heart Attack | ಕಡು ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆಯಾ ಹಾರ್ಟ್ ಅಟ್ಯಾಕ್ ಅಪಾಯ? ತಜ್ಞರು ಹೇಳುವುದೇನು?
Author: Meghana Gowda
Posted By: Meghana Gowda
Updated: May 25, 2026 | 2:15 PM

ದೇಶದ ಹಲವು ಭಾಗಗಳಲ್ಲಿ ತಾಪಮಾನ (Temperature) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೀವ್ರ ಬಿಸಿಲು ಮತ್ತು ಬಿಸಿಗಾಳಿ (Heatwave) ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್ (Dehydration) ಮತ್ತು ಹೀಟ್ ಸ್ಟ್ರೋಕ್ (Heat stroke) ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಹೆಚ್ಚುತ್ತಿರುವ ಬಿಸಿಲಿನಿಂದ ಹೃದಯಾಘಾತದ (Heart attack) ಅಪಾಯವೂ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ದೆಹಲಿ ರಾಜೀವ್ ಗಾಂಧಿ ಆಸ್ಪತ್ರೆಯ (Rajiv Gandhi Hospital) ಹೃದಯರೋಗ ತಜ್ಞ (Cardiologist) ಡಾ. ಅಜಿತ್ ಜೈನ್ ಅವರ ಪ್ರಕಾರ, “ಬಿಸಿಲು ನೇರವಾಗಿ ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ. ಆದರೆ ಅತಿಯಾದ ಉಷ್ಣಾಂಶ ಹೃದಯದ ಮೇಲೆ ಹೆಚ್ಚುವರಿ ಒತ್ತಡ (Extra stress) ಉಂಟುಮಾಡಬಹುದು. ವಿಶೇಷವಾಗಿ ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು” ಎಂದು ಅವರು ಎಚ್ಚರಿಸಿದ್ದಾರೆ.

ಬಿಸಿಲು ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವೇನು? 

  • ರಕ್ತ ಸಂಚಾರದ ಮೇಲೆ ಪರಿಣಾಮ: ತಾಪಮಾನ ಹೆಚ್ಚಾದಾಗ ದೇಹವನ್ನು ತಂಪಾಗಿಡಲು ನಮ್ಮ ದೇಹ ಹೆಚ್ಚು ಶ್ರಮಿಸುತ್ತದೆ. ಈ ಸಮಯದಲ್ಲಿ ಹೃದಯವು ರಕ್ತ ಸಂಚಾರವನ್ನು (Blood circulation) ವೇಗವಾಗಿ ನಡೆಸಬೇಕಾಗುತ್ತದೆ.

  • ಖನಿಜಗಳ ಕೊರತೆ: ಹೆಚ್ಚು ಬೆವರು (Sweating) ಬರುವುದರಿಂದ ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ (Minerals) ಕೊರತೆ ಉಂಟಾಗಬಹುದು. ಇದರಿಂದ ರಕ್ತದೊತ್ತಡ (Blood pressure) ಮತ್ತು ಹೃದಯ ಬಡಿತದಲ್ಲಿ (Heart rate) ಏರುಪೇರು ಸಂಭವಿಸಬಹುದು.

  • ರಕ್ತ ಹೆಪ್ಪುಗಟ್ಟುವಿಕೆ: ತಜ್ಞರ ಪ್ರಕಾರ, ದೀರ್ಘಕಾಲ ಡಿಹೈಡ್ರೇಶನ್ ಇದ್ದರೆ ರಕ್ತ ಗಟ್ಟಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಕೆಲ ಸಂದರ್ಭಗಳಲ್ಲಿ ಇದರಿಂದ ರಕ್ತನಾಳಗಳಲ್ಲಿ ರಕ್ತದ ಗುಡ್ಡೆ (Blood clot) ಉಂಟಾಗಿ ಹೃದಯಾಘಾತಕ್ಕೂ ಕಾರಣವಾಗಬಹುದು.

ಯಾರಲ್ಲಿ ಈ ಅಪಾಯ ಹೆಚ್ಚು? 

  • ಹೈ ಬಿಪಿ ಇರುವವರಲ್ಲಿ (People with High BP)

  • ಈಗಾಗಲೇ ಹೃದಯರೋಗ ಇರುವವರಲ್ಲಿ (Heart patients)

  • ವೃದ್ಧರಲ್ಲಿ (Elderly people)

  • ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರಲ್ಲಿ (Outdoor workers)

  • ಡಿಹೈಡ್ರೇಶನ್ ಸಮಸ್ಯೆ ಇರುವವರಲ್ಲಿ (Those with severe dehydration)

ಗಮನಿಸಬೇಕಾದ ಪ್ರಮುಖ ಲಕ್ಷಣಗಳು 

  • ಅಚಾನಕ್ ಹೆಚ್ಚು ಬೆವರು ಬರುವುದು (Sudden excessive sweating)

  • ಹೃದಯ ಬಡಿತ ವೇಗವಾಗುವುದು (Rapid heart rate)

  • ಎದೆನೋವು (Chest pain)

  • ಉಸಿರಾಟದ ತೊಂದರೆ (Shortness of breath)

  • ದೌರ್ಬಲ್ಯ ಮತ್ತು ತಲೆಸುತ್ತು (Weakness and dizziness)

ಬಿಸಿಲಿನ ಸಮಯದಲ್ಲಿ ಹೇಗೆ ಜಾಗರೂಕರಾಗಬೇಕು? 

ತಜ್ಞರ ಸಲಹೆಯಂತೆ, ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ  ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು. ಗಾಳಿಯಾಡುವ ತೆಳುವಾದ ಹಾಗೂ ಹಗುರವಾದ ಬಟ್ಟೆ ಧರಿಸುವುದು ಉತ್ತಮ. ಹೃದಯ ಸಂಬಂಧಿತ ಕಾಯಿಲೆ ಇರುವವರು ತಮ್ಮ ಔಷಧಿಗಳನ್ನು  ನಿಯಮಿತವಾಗಿ ತೆಗೆದುಕೊಳ್ಳಬೇಕು. ಜೊತೆಗೆ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವನ್ನು ಲಘುವಾಗಿ ತೆಗೆದುಕೊಳ್ಳದೆ, ದೇಹದಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣಗಳನ್ನು ತಕ್ಷಣ ವೈದ್ಯರಿಗೆ  ತೋರಿಸುವುದು ಅತ್ಯಂತ ಮುಖ್ಯ.