ಬೆಂಗಳೂರು: ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯಕ್ಕೆ ಭದ್ರತೆ ಮತ್ತು ಸಂಚಾರ ವ್ಯವಸ್ಥೆಯ ಕುರಿತು ಸೆಂಟ್ರಲ್ ಡಿಸಿಪಿ ಅಕ್ಷಯ್ ಅವರು ಅಧಿಕಾರಿಗಳಿಗೆ ಬ್ರೀಫಿಂಗ್ ನೀಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಪ್ರವೇಶ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಈ ಬಾರಿ ಕಬ್ಬನ್ ರೋಡ್‌ನಲ್ಲಿ ಹೆಚ್ಚಿನ ಎಂಟ್ರಿ ಪಾಯಿಂಟ್ ನೀಡಲಾಗಿದೆ. ಇಲ್ಲಿ ಗೇಟ್‌ಗಳು ವಿಶಾಲವಾಗಿದ್ದು (Wider gates), ಪ್ರವೇಶ ಸುಗಮವಾಗಿರಲಿದೆ. ಭದ್ರತೆ ಮತ್ತು ಸಂಚಾರ ದಟ್ಟಣೆ ತಪ್ಪಿಸಲು ಯಾರೂ ಕೂಡ ಫುಟ್‌ಪಾತ್‌ನಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ.
ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಲೋಕೋಪಯೋಗಿ ಇಲಾಖೆ (PWD) ಮತ್ತು ವೈದ್ಯಕೀಯ ಸೇವಾ ತಂಡಗಳು ಕ್ರೀಡಾಂಗಣದಲ್ಲಿ ಮೊಕ್ಕಾಂ ಹೂಡಲಿವೆ. ಪಿಎಸ್‌ಐ, ಎಸ್‌ಪಿ ಸೇರಿದಂತೆ ಎಲ್ಲಾ ದರ್ಜೆಯ ಅಧಿಕಾರಿಗಳಿಗೆ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.
ಕ್ಯೂಆರ್ ಕೋಡ್ ಟಿಕೆಟ್: ಪ್ರೇಕ್ಷಕರಿಗೆ ಅನುಕೂಲವಾಗಲು ಟಿಕೆಟ್ ಜೊತೆಯಲ್ಲೇ ಮೆಟ್ರೋ ಕ್ಯೂಆರ್ ಕೋಡ್ ನೀಡಲಾಗಿದೆ. ಮೆಟ್ರೋ ಬಳಸಿದರೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಬೇಗ ಬರಬಹುದು. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಖರೀದಿಸುವಾಗಲೇ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿಪಿ ಅಕ್ಷಯ್ (DCP Akshaye) ಸಲಹೆ ನೀಡಿದ್ದಾರೆ.
