S Shorts

ಭರ್ತಿಯತ್ತ Kabini ಜಲಾಶಯ; ಕಾವೇರಿ ವಿವಾದದ ನಡುವೆ ತಮಿಳುನಾಡಿಗೆ ನಿತ್ಯ 25,000 ಕ್ಯೂಸೆಕ್ ನೀರು ಬಿಡುಗಡೆ

ಭರ್ತಿಯತ್ತ Kabini ಜಲಾಶಯ; ಕಾವೇರಿ ವಿವಾದದ ನಡುವೆ ತಮಿಳುನಾಡಿಗೆ ನಿತ್ಯ 25,000 ಕ್ಯೂಸೆಕ್ ನೀರು ಬಿಡುಗಡೆ
Author: Sagaradventure
Posted By: Sagaradventure
Updated: Aug 5, 2026 | 10:42 AM

ಮೈಸೂರು: ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬೀದರಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.

2284 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 2282 ಅಡಿಗೆ ತಲುಪಿದ್ದು, ಬಹುತೇಕ ಭರ್ತಿಯಾಗುವ ಹಂತದಲ್ಲಿದೆ. ಸದ್ಯ ಜಲಾಶಯಕ್ಕೆ 22,256 ಕ್ಯೂಸೆಕ್ ಒಳಹರಿವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 27,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಒಂದೆಡೆ ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ರಾಜ್ಯ ಸರ್ಕಾರಕ್ಕೆ ತುಸು ನಿರಾಳ ತಂದಿದೆ. ಜಲಾಶಯದಿಂದ ಹೊರಬಿಡಲಾಗುತ್ತಿರುವ ನೀರಿನ ಪೈಕಿ, ಕಳೆದ 5 ದಿನಗಳಿಂದ ಪ್ರತಿನಿತ್ಯ 25 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದ್ದು, ನೆರೆ ರಾಜ್ಯದ ಪಾಲಿನ ನೀರಿನ ಬಿಡುಗಡೆಗೆ ಇದು ನೆರವಾಗಿದೆ.