S Shorts

Karnataka | ಬೆಂಗಳೂರು- ತುಮಕೂರು ನಡುವೆ ಬರಲಿದೆ 4 ಪಥದ ಹಳಿ, ಇನ್ನ 5 ತಿಂಗಳಲ್ಲಿ ಭೂಸ್ವಾಧೀನ!

Karnataka | ಬೆಂಗಳೂರು- ತುಮಕೂರು ನಡುವೆ ಬರಲಿದೆ 4 ಪಥದ ಹಳಿ, ಇನ್ನ 5 ತಿಂಗಳಲ್ಲಿ ಭೂಸ್ವಾಧೀನ!
Author: Meghana Gowda
Posted By: Meghana Gowda
Updated: Jun 22, 2026 | 11:30 AM

ಬೆಂಗಳೂರು: ಸಿಲಿಕಾನ್ ಸಿಟಿ ಮತ್ತು ಕಲ್ಪತರು ನಾಡಿನ ನಡುವೆ ಸಂಚರಿಸುವ ನಿತ್ಯಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮತ್ತು ತುಮಕೂರು ನಡುವೆ ಹೆಚ್ಚುತ್ತಿರುವ ಜನದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸುಮಾರು ₹6,000 ಕೋಟಿ ವೆಚ್ಚದ ಚತುಷ್ಪಥ (Quadruple Railway Line) ರೈಲು ಮಾರ್ಗ ಯೋಜನೆಗೆ ಸಿದ್ಧತೆಗಳು ವೇಗವಾಗಿ ಸಾಗುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (Union Minister V Somanna) ತಿಳಿಸಿದ್ದಾರೆ.

ಏನಿದು ಯೋಜನೆ? ಇದರಿಂದಾಗುವ ಲಾಭಗಳೇನು?

  • ಪ್ರತ್ಯೇಕ ಹಳಿಗಳ ವ್ಯವಸ್ಥೆ: ಪ್ರಸ್ತುತ ಇರುವ ರೈಲ್ವೆ ಹಳಿಗಳನ್ನು ನಾಲ್ಕು ಪಥಗಳನ್ನಾಗಿ (Four Lanes) ವಿಸ್ತರಿಸಲಾಗುವುದು. ಇದರಿಂದ ದೂರದ ಊರುಗಳಿಗೆ ಹೋಗುವ ಎಕ್ಸ್‌ಪ್ರೆಸ್ ರೈಲುಗಳು (Express Trains) ಮತ್ತು ನಿತ್ಯ ಸಂಚರಿಸುವ ಲೋಕಲ್ ಪ್ಯಾಸೆಂಜರ್ ರೈಲುಗಳಿಗೆ (Local Passenger Trains) ಪ್ರತ್ಯೇಕ ಹಳಿ ಸಿಗಲಿದೆ. ಪರಿಣಾಮವಾಗಿ ರೈಲುಗಳು ತಡವಾಗಿ ಚಲಿಸುವುದು ತಪ್ಪುತ್ತದೆ.

  • ಸಮಯದ ಉಳಿತಾಯ: ಇಂಧನ ಬೆಲೆ ಏರಿಕೆಯಿಂದಾಗಿ ಬಸ್ ಹಾಗೂ ಸ್ವಂತ ವಾಹನಗಳ ಮೂಲಕ ಸಂಚರಿಸುವವರು ಟ್ರಾಫಿಕ್‌ನಲ್ಲಿ ಸಿಲುಕುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಪ್ರಯಾಣದ ಅವಧಿ (Travel Time) ಗಣನೀಯವಾಗಿ ಕಡಿಮೆಯಾಗಲಿದ್ದು, ಜನರು ರೈಲು ಪ್ರಯಾಣದ ಕಡೆ ಹೆಚ್ಚು ಮುಖ ಮಾಡಲಿದ್ದಾರೆ. ಇದು ಉಭಯ ನಗರಗಳ ಆರ್ಥಿಕ ಬೆಳವಣಿಗೆಗೂ ವೇಗ ನೀಡಲಿದೆ.

5-6 ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ: ಯೋಜನೆಯ ಪ್ರಗತಿ ಕುರಿತು ಮಾತನಾಡಿದ ಸಚಿವ ವಿ. ಸೋಮಣ್ಣ, “ಈಗಾಗಲೇ ವಿಸ್ತೃತ ಯೋಜನಾ ವರದಿ (DPR – Detailed Project Report) ಸಿದ್ಧವಾಗಿದ್ದು, ರೈಲ್ವೆ ಇಲಾಖೆಯ ಉನ್ನತ ತಾಂತ್ರಿಕ ಸಮಿತಿ ಇದಕ್ಕೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಇದು ಕೇಂದ್ರ ಸಚಿವ ಸಂಪುಟ (Union Cabinet) ಮತ್ತು ನೀತಿ ಆಯೋಗದ (Niti Aayog) ಒಪ್ಪಿಗೆಗೆ ಸಲ್ಲಿಕೆಯಾಗಲಿದೆ. ಯೋಜನೆಗೆ ಅಗತ್ಯವಿರುವ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ 5 ರಿಂದ 6 ತಿಂಗಳೊಳಗೆ ಅಧಿಕೃತ ಭೂಸ್ವಾಧೀನ (Land Acquisition) ಪ್ರಕ್ರಿಯೆ ಆರಂಭವಾಗಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.