S Shorts

Murder Case | ಇಂದು ರೇಣುಕಾಸ್ವಾಮಿ ಪೋಷಕರ ವಿಚಾರಣೆ: ದರ್ಶನ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!

Murder Case | ಇಂದು ರೇಣುಕಾಸ್ವಾಮಿ ಪೋಷಕರ ವಿಚಾರಣೆ: ದರ್ಶನ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
Author: Meghana Gowda
Posted By: Meghana Gowda
Updated: Dec 17, 2025 | 3:53 AM

ಬೆಂಗಳೂರು : ನಟ ದರ್ಶನ್ (Darshan) ಮತ್ತು ಅವರ ಸಹಚರರ ಮೇಲೆ ಆರೋಪವಿರುವ ರೇಣುಕಾಸ್ವಾಮಿ ಹ*ತ್ಯೆ (Renukaswamy Murder) ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ಈ ಬೆಳವಣಿಗೆಯು ಆರೋಪಿಗಳಿಗೆ ಮತ್ತೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ಕೋರ್ಟ್‌ಗೆ ರೇಣುಕಾಸ್ವಾಮಿ ಪೋಷಕರು:

ಪ್ರಕರಣದ ಪ್ರಮುಖ ಸಾಕ್ಷಿಗಳಾಗಿರುವ ಮೃತ ರೇಣುಕಾಸ್ವಾಮಿ ಅವರ ತಂದೆ-ತಾಯಿ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಹೆಚ್ 57 ಕೋರ್ಟ್ (CCH 57 Court) ನೋಟಿಸ್ ನೀಡಿತ್ತು. ಅದರಂತೆ, ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮತ್ತು ತಾಯಿ ರತ್ನಪ್ರಭ ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಕೋರ್ಟ್‌ಗೆ ತೆರಳುವ ಮುನ್ನ ಅವರು ದೇವರ ದರ್ಶನ ಮಾಡಿ ಬರಲಿದ್ದಾರೆ.

ರೇಣುಕಾಸ್ವಾಮಿ ಪೋಷಕರು ಈ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದು, ಅವರ ಹೇಳಿಕೆಗಳು ತನಿಖೆಯ ದಿಕ್ಕನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿವೆ. ತಂದೆ ಕಾಶೀನಾಥಯ್ಯ ಅವರು 7ನೇ ಮುಖ್ಯ ಸಾಕ್ಷಿ ಆಗಿದ್ದಾರೆ.ತಾಯಿ ರತ್ನಪ್ರಭ ಅವರು 8ನೇ ಮುಖ್ಯ ಸಾಕ್ಷಿ ಆಗಿದ್ದಾರೆ.

ಈ ಪ್ರಮುಖ ಸಾಕ್ಷಿಗಳ ಹಾಜರಾತಿ ಮತ್ತು ಮುಂಬರುವ ವಿಚಾರಣಾ ಪ್ರಕ್ರಿಯೆಗಳು ದರ್ಶನ್ ಮತ್ತು ಅವರ ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟವನ್ನು ತರಬಹುದು ಎಂದು ಹೇಳಲಾಗುತ್ತಿದೆ.

[products category="Bins and Bathroom" limit="8" columns="4"]