S Shorts

ಜಮೀರ್ JDSಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

ಜಮೀರ್ JDSಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ
Author: Savina Naik
Posted By: Savina Naik
Updated: Apr 22, 2026 | 4:14 PM

ಬೆಂಗಳೂರು:  ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಕಾಂಗ್ರೆಸ್​​​​ನಲ್ಲಿ ಒಳಬೇಗುದಿ ಸ್ಫೋಟಗೊಂಡಿದ್ದು, ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ.  ಇದರ ಮಧ್ಯೆ ಇದೀಗ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಜೆಡಿಎಸ್‌ಗೆ ವಾಪಸ್‌ ತೆರಳುತ್ತಾರೆ ಎಂಬ ವದಂತಿ ಜೋರಾಗಿದೆ. ಇತ್ತೀಚೆಗೆ ಖಾಸಗಿ ಹೋಟೆಲ್​​ನಲ್ಲಿ ಜಮೀರ್ ಅಹ್ಮದ್ ಖಾನ್ ಹಾಗೂ ಕುಮಾರಸ್ವಾಮಿ ಭೇಟಿಯಾಗಿದ್ದು ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಜಮೀರ್ ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಗೆ  ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸುಮ್ಮನೇ ಮಾಧ್ಯಮದಲ್ಲಿ ಬರ್ತಿರುವ ವಿಚಾರ ಅದು. ಅವರು ಈಗಾಗಲೇ ಈ ವಿಚಾರಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಸ್ಥಾನಮಾನ ಕೊಟ್ಟಿದೆ. ಅವರ ಬಗ್ಗೆ ಚರ್ಚೆ ಬೇಡ, ನಮ್ಮ ಪಾರ್ಟಿ ಕಟ್ಟೋಕೆ ಕಾರ್ಯಕರ್ತರಿದ್ದಾರೆ. ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಸಿದ್ಧರಿದ್ದಾರೆ. ಪಕ್ಷ ಯಾರನ್ನ ನೆಚ್ಚಿಕೊಂಡಿಲ್ಲ ಅಂತ ಜಮೀರ್‌ಗೆ ತಿರುಗೇಟು ಕೊಟ್ಟಿದ್ದಾರೆ.

ಅಲ್ಪಸಂಖ್ಯಾತರು ಜೆಡಿಎಸ್ ಕಡೆಗೆ ಮುಖ ಮಾಡುವ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗಲೂ ತಮ್ಮನ್ನು ‘ಅಹಿಂದ’ ನಾಯಕನೆಂದು ಕರೆದುಕೊಳ್ಳುತ್ತಾರೆ.  ರಾಜಣ್ಣ, ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ಕೈಬಿಟ್ಟಾಗಿದೆ. ಜಬ್ಬಾರ್, ನಜೀರ್ ತಲೆದಂಡ ಆಗಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ. ಆ ಕ್ಷೇತ್ರದಲ್ಲಿ ಮುಸ್ಲಿಂ ಬಾಂದವರಿಗೆ ಟಿಕೆಟ್ ಕೊಡಬೇಕಿತ್ತು. ಅಲ್ಲಿ ಜಬ್ಬಾರ್, ನಜೀರ್ ಕೈ ಬಿಟ್ಟಿದ್ದಾರೆ. ಅಹಿಂದದಲ್ಲಿ ಅ-ಅಲ್ಪಸಂಖ್ಯಾತ, ದ-ದಲಿತ ಹೋಗಿದೆ. ಉಳಿದಿರೋದು ಹಿಂದುಳಿದ ಅನ್ನೋದು, ಅದು ಯಾವಾಗ ಹೋಗುತ್ತದೆ ಗೊತ್ತಿಲ್ಲ. ಸಂಪೂರ್ಣ ಅಹಿಂದ ಛಿದ್ರಗೊಳ್ಳುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.