S Shorts

ಬೆಂಗಳೂರಿನಲ್ಲಿ ಮಾರ್ಚ್‌ 27ಕ್ಕೆ ಮಾಂಸ ಮಾರಾಟ ನಿಷೇಧ

ಬೆಂಗಳೂರಿನಲ್ಲಿ ಮಾರ್ಚ್‌ 27ಕ್ಕೆ ಮಾಂಸ ಮಾರಾಟ ನಿಷೇಧ
Author: Savina Naik
Posted By: Savina Naik
Updated: Mar 25, 2026 | 5:19 PM

ಬೆಂಗಳೂರು: ರಾಮನವಮಿ ಹಿನ್ನೆಲೆ ಮಾರ್ಚ್‌ 27 ದಿನವಿಡೀ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ.

ಶ್ರೀರಾಮನವಮಿ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಗರಿಕರು ಮತ್ತು ವ್ಯಾಪಾರಿಗಳು ಸಹಕರಿಸಲು ಮತ್ತು ಆದೇಶವನ್ನು ಪಾಲಿಸಲು ವಿನಂತಿಸಲಾಗಿದೆ ಎಂದು ಅಪರ ನಿರ್ದೇಶಕರು (ಪಶುಪಾಲನೆ) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಶ್ರೀರಾಮನವಮಿ ಅಂಗವಾಗಿ ಮಾರ್ಚ್ 27 ರಂದು ಬೆಂಗಳೂರಿನಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಿದೆ. ಹಬ್ಬದ ದಿನದಂದು ಎಲ್ಲಾ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳು ಮುಚ್ಚಿರಲಿವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ. ಶಾಂತಿ ಮತ್ತು ಧಾರ್ಮಿಕ ಭಾವನೆಗಳನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು GBA ತಿಳಿಸಿದೆ.

ರಾಮನವಮಿಯು ಶ್ರೀರಾಮನ ಜನ್ಮದಿನವಾಗಿದ್ದು, ಹಿಂದೂಗಳು ಈ ದಿನದಂದು ಅನೇಕ ಜನರು ಉಪವಾಸ ಮಾಡುತ್ತಾರೆ ಮತ್ತು ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ತಡೆಯಲು ಮತ್ತು ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ.