S Shorts

ಕೋತಿಗಳ ದಾಳಿಗೆ ಹೆದರಿ ಬೆಟ್ಟದಿಂದ ಕಾಲುಜಾರಿ ಬಿದ್ದು ನವವಿವಾಹಿತೆ ದುರ್ಮ*ರಣ..!

ಕೋತಿಗಳ ದಾಳಿಗೆ ಹೆದರಿ ಬೆಟ್ಟದಿಂದ ಕಾಲುಜಾರಿ ಬಿದ್ದು ನವವಿವಾಹಿತೆ ದುರ್ಮ*ರಣ..!
Author: Meghana Gowda
Posted By: Meghana Gowda
Updated: Jun 27, 2026 | 1:33 PM

ಚೆನ್ನೈ:ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಕೋತಿಗಳ ಹಿಂಡಿಗೆ ಹೆದರಿ ನವವಿವಾಹಿತ ಮಹಿಳೆಯೊಬ್ಬರು ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಮೃತ ಅನಿತಾ ಅವರಿಗೆ ಕಳೆದ ತಿಂಗಳಷ್ಟೇ ವಿದೇಶದಲ್ಲಿ ಕೆಲಸ ಮಾಡುವ ಸುರೇಶ್ ಎಂಬುವರೊಂದಿಗೆ ಮದುವೆಯಾಗಿತ್ತು. ದಂಪತಿ ಇಲ್ಲಿನ ಕಲುಗಸಲಮೂರ್ತಿ ದೇವಸ್ಥಾನದ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ಗುಡಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಈ ವೇಳೆ ಬೆಟ್ಟದ ಮೇಲಿದ್ದ ಕೋತಿಗಳಿಗೆ ಹಣ್ಣು ನೀಡಲು ಹೋದಾಗ, ಹಲವು ಕೋತಿಗಳು ಒಮ್ಮೆಗೆ ಇವರನ್ನು ಸುತ್ತುವರಿದಿವೆ. ಇದರಿಂದ ತೀವ್ರ ಗಾಬರಿಗೊಂಡ ಅನಿತಾ, ತಪ್ಪಿಸಿಕೊಳ್ಳಲು ಹೋಗಿ ಕಾಲು ಜಾರಿ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.