ಬೆಂಗಳೂರು: ರಾಜ್ಯದ 2026-27ನೇ ಸಾಲಿನ ಆಯವ್ಯಯ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 6ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಹದಿನಾರನೇ ವಿಧಾನಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಈ ಉಪವೇಶನವು ಅಂದು ಬೆಳಿಗ್ಗೆ 10.15ಕ್ಕೆ ವಿಧಾನ ಸೌಧದಲ್ಲಿ ಆರಂಭವಾಗಲಿದೆ.
ಅಧಿವೇಶನದ ಪ್ರಮುಖ ದಿನಾಂಕಗಳು:
ಬಜೆಟ್ ಮಂಡನೆ: ಮಾರ್ಚ್ 06, 2026 (ಶುಕ್ರವಾರ) ಬೆಳಿಗ್ಗೆ 10.15 ಗಂಟೆಗೆ.
ಅಧಿವೇಶನದ ಅವಧಿ: ಮಾರ್ಚ್ 6ರಿಂದ ಆರಂಭಗೊಂಡು ಮಾರ್ಚ್ 27ರವರೆಗೆ ಅಧಿವೇಶನ ನಡೆಯಲಿದೆ.
ಒಟ್ಟು ಕಾಲಾವಧಿ: ಸರಿಸುಮಾರು 3 ವಾರಗಳ ಕಾಲ ಈ ಬಜೆಟ್ ಅಧಿವೇಶನ ನಡೆಯಲಿದ್ದು, ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ.
ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ:
ವಿಧಾನಸಭೆ ಸಚಿವಾಲಯ ಹೊರಡಿಸಿರುವ ತಾತ್ಕಾಲಿಕ ವೇಳಾಪಟ್ಟಿಯಂತೆ ಮಾರ್ಚ್ 9 ರಿಂದ 13ರವರೆಗೆ ಮತ್ತು ಮಾರ್ಚ್ 16 ರಿಂದ 18ರವರೆಗೆ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ . ಮಾರ್ಚ್ 19ರಂದು ಸಾರ್ವತ್ರಿಕ ರಜೆ ಇರಲಿದ್ದು, ಮಾರ್ಚ್ 20ರಂದು ಯಾವುದೇ ಉಪವೇಶನ ಇರುವುದಿಲ್ಲ . ಅಂತಿಮವಾಗಿ ಮಾರ್ಚ್ 27ರವರೆಗೆ ಅಧಿವೇಶನ ಮುಂದುವರಿಯಲಿದೆ.
ಈ ಕುರಿತು ಈಗಾಗಲೇ ವಿಧಾನಸಭೆಯ ಎಲ್ಲಾ ಸದಸ್ಯರಿಗೆ ಅಧಿಕೃತ ಮಾಹಿತಿಯನ್ನು ರವಾನಿಸಲಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ತಿಳಿಸಿದ್ದಾರೆ .
