S Shorts

“ಮದುವೆಯಾಗಿದ್ದರೂ ಅಕ್ರಮ ಸಂಬಂಧ, ಸ್ವತಂತ್ರ ಓಡಾಟ ಕಾನೂನುಬದ್ಧವಲ್ಲ: ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಶ್ರೀದೇವಿ ಭೈರಪ್ಪ ಸಂದೇಶ”

“ಮದುವೆಯಾಗಿದ್ದರೂ ಅಕ್ರಮ ಸಂಬಂಧ, ಸ್ವತಂತ್ರ ಓಡಾಟ ಕಾನೂನುಬದ್ಧವಲ್ಲ: ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಶ್ರೀದೇವಿ ಭೈರಪ್ಪ ಸಂದೇಶ”
Author: Savina Naik
Posted By: Savina Naik
Updated: Apr 23, 2026 | 3:26 PM

ಬೆಂಗಳೂರು: 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ಹಾಗೂ ಶ್ರೀದೇವಿ ವೈಯಕ್ತಿಕ ಕಾರಣಗಳಿಂದ ದೂರ ಊಳಿದಿದ್ದಾರೆ. ಆದರೆ ಈಗ  ನಟ ಯುವ ಅವರಿಂದ ವಿಚ್ಛೇದನ ಕೇಳಿರುವ ಶ್ರೀದೇವಿ ಬೈರಪ್ಪ, ಮಹಿಳೆಯರಲ್ಲಿ ಹಕ್ಕುಗಳ ಕುರಿತು ಜಾಗೃತಿ, ವಿವಾಹದ ನಂತರ ಮಹಿಳೆಯರು ಎದುರಿಸುವ ಸವಾಲುಗಳು, ಸುಳ್ಳು ಆರೋಪಗಳನ್ನು ಎದುರಿಸುವ ವಿಧಾನ ಮತ್ತು ನ್ಯಾಯಾಲಯದಲ್ಲಿ ಪುರಾವೆಗಳ ಮಹತ್ವದ ಬಗ್ಗೆ ಅವರು ಮಾತನಾಡಿದ್ದಾರೆ.

ಈ ಪ್ರಕರಣ ಇನ್ನೂ ಕೋರ್ಟ್​​ನಲ್ಲಿ ಇದೆ ಎನ್ನಲಾಗಿದೆ. ಈಗ ಶ್ರೀದೇವಿ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅದು ಕೂಡ ಯುವ ಜೊತೆಗಿನ ಫೋಟೋ ಹಂಚಿಕೊಂಡು! ಫೋಟೋ ಕ್ಯಾಪ್ಶನ್​​ ಅಲ್ಲಿ ಉದ್ದನೆಯ ಸಂದೇಶ ಬರೆದಿದ್ದಾರೆ.

ನಾನು ಇವುಗಳನ್ನು ಶಿಕ್ಷಣ ವ್ಯವಸ್ಥೆಯಿಂದಾಗಲಿ ಅಥವಾ ಸಮಾಜದಿಂದಾಗಲಿ ಕಲಿಯಲಿಲ್ಲ; ಬದಲಾಗಿ ಕಷ್ಟದ ಸಮಯಗಳಲ್ಲಿ ಮತ್ತು ನಮಗಿಂತ ಮೊದಲು ಹೋರಾಡಿದವರಿಂದ ಕಲಿತಿದ್ದೇನೆ. ಎಲ್ಲಾ ಮಹಿಳೆಯರು ಘನತೆಯಿಂದ ಬದುಕಲಿ ಎಂಬುದು ಇದರ ಆಶಯ.

 

View this post on Instagram

 

A post shared by Sridevi Byrappa (@sridevibyrappa)

ನಾವು ಹೆಣ್ಣುಮಕ್ಕಳನ್ನು ಮದುವೆಗಾಗಿ ಸಿದ್ಧಪಡಿಸುತ್ತೇವೆ – ನಮ್ಮ ಕುಟುಂಬವನ್ನು ಬಿಟ್ಟು ಮತ್ತೊಂದು ಕುಟುಂಬಕ್ಕೆ ಸೇರಲು ಕಲಿಸುತ್ತೇವೆ. ಆದರೆ, ಅವರ ಹಕ್ಕುಗಳ ಬಗ್ಗೆ ನಾವು ಅವರನ್ನು ಸಿದ್ಧಪಡಿಸುವುದು ತೀರಾ ವಿರಳ. ನೋವು ಮತ್ತು ಸಂಕಟಗಳನ್ನು ಅನುಭವಿಸುತ್ತಿದ್ದರೂ, ಸೋಲೊಪ್ಪಿಕೊಳ್ಳದೆ ಹೋರಾಡಲು ನಿರ್ಧರಿಸಿದ ಎಲ್ಲಾ ಮಹಿಳೆಯರಿಗಾಗಿ ಇಲ್ಲಿವೆ ಎರಡು ಪ್ರಮುಖ ಸಂದೇಶಗಳು.

ಸುಖಿ ಸಂಸಾರದ ನಂತರವೂ ನಿಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರೆ, ತಾಳ್ಮೆಯಿಂದಿರಿ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ. ಅದನ್ನು ಸಾಬೀತುಪಡಿಸಬೇಕಾದ ಜವಾಬ್ದಾರಿ ಅವರದ್ದೇ ಹೊರತು ನಿಮ್ಮದಲ್ಲ. ಮಹಿಳೆಯರನ್ನು ಬೆದರಿಸಿ ಅಡಗಿಸಿಡಲು ಬಳಸುವ ಅತ್ಯಂತ ಅಗ್ಗದ ಅಸ್ತ್ರವೆಂದರೆ ‘ಅಪಮಾನ’. ನ್ಯಾಯಾಲಯಕ್ಕೆ ಬೇಕಿರುವುದು ಸಾಕ್ಷ್ಯಗಳೇ ಹೊರತು ಯಾರೋ ಬರೆದ ಅಗ್ಗದ ಕಟ್ಟುಕಥೆಗಳಲ್ಲ.

ಸಾಮಾಜಿಕ ಜಾಲತಾಣಗಳಿಂದ ಫೋಟೋ ಮತ್ತು ದಾಖಲೆಗಳನ್ನು ಅಳಿಸಿಹಾಕುವಂತೆ ಬೆದರಿಸುವುದು ಅಥವಾ ನಿಮಗೆ ಯಾವುದೇ “ಕಾನೂನು ಹಕ್ಕುಗಳಿಲ್ಲ” ಎಂದು ಹೇಳುವುದು ತಪ್ಪು. ನಿಜ ಹೇಳಬೇಕೆಂದರೆ, ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಸಹ ಅಕ್ರಮ ಸಂಬಂಧ ಹೊಂದುವುದು ಮತ್ತು ಎಲ್ಲೆಂದರಲ್ಲಿ ಸ್ವತಂತ್ರವಾಗಿ ಸುತ್ತುವುದು ಕಾನೂನುಬಾಹಿರ.

ಪ್ರತಿಯೊಂದು ಗಾಯವೂ ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಪ್ರತಿ ಮೌನಕ್ಕೂ ಒಂದು ಬೆಲೆ ಇರುತ್ತದೆ. ಮಹಿಳೆಯರಿಗೆ ಹಾನಿ ಮಾಡುವ ಮತ್ತು ಅವರನ್ನು ಲಘುವಾಗಿ ಪರಿಗಣಿಸುವ ಸಮಾಜವನ್ನು ನಾವು ಸಾಮಾನ್ಯೀಕರಿಸಬಾರದು. ಈ ವ್ಯವಸ್ಥೆ ನಮ್ಮ ಪೀಳಿಗೆಯೊಂದಿಗೆ ಕೊನೆಗೊಳ್ಳಬೇಕು. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಬದುಕಲು ಹೆಚ್ಚು ಸುರಕ್ಷಿತವಾದ ಪ್ರಪಂಚ ಸಿಗಬೇಕು ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ.