S Shorts

ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ
Author: Savina Naik
Posted By: Savina Naik
Updated: Mar 31, 2026 | 4:01 PM

ನವದೆಹಲಿ:  ಪಶ್ಚಿಮ ಬಂಗಾಳ  ಚುನಾವಣೆ ಹೊತ್ತಲ್ಲೇ, ಭಾರತೀಯ ಟೆನಿಸ್‌ ಐಕಾನ್‌ ಲಿಯಾಂಡರ್‌ ಪೇಸ್‌   ಇಂದು ಬಿಜೆಪಿಗೆ  ಸೇರ್ಪಡೆಯಾಗಿದ್ದಾರೆ.

ಟೆನಿಸ್‌ ಐಕಾನ್‌ ಲಿಯಾಂಡರ್‌ ಪೇಸ್‌ ಅವರು ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಸುಕಾಂತ ಮಜುಂದಾರ್ ಅವರ ಸಮ್ಮುಖದಲ್ಲಿ ಪೇಸ್ ಬಿಜೆಪಿಗೆ ಸೇರಿದ್ದಾರೆ.

ಪೇಸ್ ಪಕ್ಷ ರಾಜಕೀಯಕ್ಕೆ ಹೊಸದೇನಲ್ಲ. ಈ ಹಿಂದೆ 2021 ರಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. 2022 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಟಿಎಂಸಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಆದರೂ, ಅವರು ಸ್ವತಃ ಒಂದು ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಪೇಸ್ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.