S Shorts

ಅಡುಗೆಕೋಣೆ ಬೀಗ ಮುರಿದು ಶಾಲೆಯಲ್ಲಿದ್ದ 6 ಸಿಲಿಂಡರ್ ಹೊತ್ತೊಯ್ದ ಕಳ್ಳರು

ಅಡುಗೆಕೋಣೆ ಬೀಗ ಮುರಿದು ಶಾಲೆಯಲ್ಲಿದ್ದ 6 ಸಿಲಿಂಡರ್ ಹೊತ್ತೊಯ್ದ ಕಳ್ಳರು
Author: Savina Naik
Posted By: Savina Naik
Updated: Mar 23, 2026 | 4:42 PM

ಬೀದರ್​​: ಬೆಂಗಳೂರು ಸೇರಿ ಜಿಲ್ಲೆ ಜಿಲ್ಲೆಗಳಲ್ಲೂ ಗ್ಯಾಸ್​ ಸಿಲಿಂಡರ್ ಅಭಾವ ತಲೆದೂರಿದೆ.  ಹಲವೆಡೆ ಹೋಟೆಲ್​ಗಳಿಗೆ ಬೀಗ ಜಡಿಯಲಾಗಿದೆ. ಗ್ಯಾಸ್​​ ಇಲ್ಲದೆ ಸಂಕಷ್ಟ ಎದುರಾಗಿದ್ದರೆ, ಕಳ್ಳರಿಗೆ ಇದೇ ಸಂಕಷ್ಟ ಹಬ್ಬವಾಗಿದೆ.

ಹಾಡಹಗಲೇ ರಾಜಾರೋಷವಾಗಿ ಸಿಲಿಂಡರ್‌ ಕಳ್ಳತನ ಮಾಡಿತ್ತಿದ್ದಾರೆ. ಬೀದರ್​​ನ ಶಾಲೆಯಲ್ಲಿದ್ದ 6 ಸಿಲಿಂಡರ್​​ ಕಳತನ ಮಾಡಿರುವಂತಹ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿದ್ದ 6 ಸಿಲಿಂಡರ್​​ಗಳನ್ನ ಕಳ್ಳರು ಹೊತ್ತೊಯ್ದಿದ್ದಾರೆ.​

ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪೂರೈಸಿದ್ದ ಸಿಲಿಂಡರ್​ಗಳನ್ನ ಅಡುಗೆಕೋಣೆ ಬೀಗ ಮುರಿದು ಕಳ್ಳರು ಹೊತ್ತೊಯ್ದಿದ್ದಾರೆ. ಸದ್ಯ ಈ ಕುರಿತಾಗಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.