S Shorts

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರ ಪಾರ್ಥಿವ ಶರೀರ ರಾಜ್ಯಕ್ಕೆ ವಾಪಸ್, ನಾಳೆ ಅಂತ್ಯಕ್ರಿಯೆ!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರ ಪಾರ್ಥಿವ ಶರೀರ ರಾಜ್ಯಕ್ಕೆ ವಾಪಸ್, ನಾಳೆ ಅಂತ್ಯಕ್ರಿಯೆ!
Author: Sagaradventure
Posted By: Sagaradventure
Updated: Nov 2, 2026 | 12:21 PM

ಬೆಂಗಳೂರು: ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಪ್ರಾಣ ಕಳೆದುಕೊಂಡ ಐವರು ಕನ್ನಡಿಗರ ಪಾರ್ಥಿವ ಶರೀರವನ್ನು ಶನಿವಾರ ರಾಜ್ಯಕ್ಕೆ ತರಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸಿದ ಈ ದುರಂತದಲ್ಲಿ ಮೃತಪಟ್ಟವರ ದೇಹಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಇದೀಗ ಎಲ್ಲ ಪ್ರಕ್ರಿಯೆಗಳು ಮುಗಿದು ಮೃತದೇಹಗಳನ್ನು ಅವರವರ ಊರುಗಳಿಗೆ ರವಾನಿಸಲಾಗಿದೆ.

ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ: 

ಮೃತರಾದ ಪ್ರತಾಪ್ ಗೌಡ, ಹೆಚ್.ಎಸ್. ನಟರಾಜ್, ಶಂಕರ್ ಗೌಡ ಮತ್ತು ಕೆ. ಸುಧೀರ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ತದನಂತರ ಆಂಬುಲೆನ್ಸ್ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.

ಬೆಳಗಾವಿಗೆ ಸಿಸಿಬಿ ಇನ್ಸ್‌ಪೆಕ್ಟರ್ ಪಾರ್ಥಿವ ಶರೀರ: 

ಈ ಐವರು ಸ್ನೇಹಿತರ ಪೈಕಿ ಬೆಳಗಾವಿಯ ಸಿ.ಸಿ.ಬಿ ಇನ್ಸ್‌ಪೆಕ್ಟರ್ ಆಗಿದ್ದ ಅರುಣ್ ಸಾಲುಂಕೆ ಅವರ ಮೃತದೇಹವನ್ನು ವಿಮಾನದ ಮೂಲಕ ನೇರವಾಗಿ ಬೆಳಗಾವಿಗೆ ರವಾನಿಸಲಾಗಿದ್ದು, ಅಲ್ಲಿ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಪಡೆದುಕೊಂಡಿದ್ದಾರೆ.

ನಾಳೆ ಎಲ್ಲೆಲ್ಲಿ ಅಂತ್ಯಕ್ರಿಯೆ?: 

ದುರಂತದಲ್ಲಿ ಮೃತಪಟ್ಟ ಎಲ್ಲರ ಅಂತ್ಯಕ್ರಿಯೆ ನಾಳೆ (ಮಂಗಳವಾರ) ಅವರವರ ಸ್ವಗ್ರಾಮಗಳಲ್ಲಿ ನೆರವೇರಲಿದೆ.

  • ಹುಲಿಯೂರು ದುರ್ಗದ ಶಂಕರೇಗೌಡ ಅವರ ಅಂತ್ಯಕ್ರಿಯೆ ಹಕ್ಕಿಮರಿಪಾಳ್ಯದಲ್ಲಿ ಬೆಳಗ್ಗೆ 8 ಗಂಟೆಗೆ ನಡೆಯಲಿದೆ.
  • ಹಳಿಯೂರಿನಲ್ಲಿ ನಟರಾಜ್ ಅವರ ಅಂತ್ಯಕ್ರಿಯೆ ಬೆಳಗ್ಗೆ 9 ಗಂಟೆಗೆ ಜರುಗಲಿದೆ.
  • ಹಾಸನ ಜಿಲ್ಲೆಯ ಬಾಚಿಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಪ್ರತಾಪ್ ಗೌಡ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.