S Shorts

Veera Kambala ; ತುಳುನಾಡಿನ ಸಾಂಸ್ಕೃತಿಕ ವೈಭವದ ಅನಾವರಣ: ಟ್ರೈಲರ್ ಬಿಡುಗಡೆ ಮಾಡಿದ ಹಂಸಲೇಖ!

Veera Kambala ; ತುಳುನಾಡಿನ ಸಾಂಸ್ಕೃತಿಕ ವೈಭವದ ಅನಾವರಣ:  ಟ್ರೈಲರ್ ಬಿಡುಗಡೆ ಮಾಡಿದ ಹಂಸಲೇಖ!
Author: Kalanvitha Jain
Posted By: Kalanvitha Jain
Updated: Feb 19, 2026 | 1:57 PM

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ದಶಕಗಳ ಕನಸಿನ ಕೂಸಾದ ‘ವೀರ ಕಂಬಳ’ ಚಿತ್ರದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ದ ಸುತ್ತ ಹೆಣೆಯಲಾದ ಈ ಚಿತ್ರದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಟ್ರೈಲರ್ ಬಿಡುಗಡೆಗೊಳಿಸಿ ಮಾತನಾಡಿದ ಹಂಸಲೇಖ ಅವರು, “ಕಲೆ ಎಂಬುದು ಮುಪ್ಪಿಲ್ಲದ ಕನ್ಯೆಯಿದ್ದಂತೆ. ವೀರತ್ವದ ಸಂಕೇತವಾದ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ ಈ ‘ವೀರ ಕಂಬಳ’” ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು. ತುಳುನಾಡಿನ ಮಣ್ಣಿನ ಘಮಲನ್ನು ಬೆಳ್ಳಿತೆರೆಯ ಮೇಲೆ ತರುತ್ತಿರುವ ಬಾಬು ಅವರ ಸಾಹಸವನ್ನು ಅವರು ಶ್ಲಾಘಿಸಿದರು.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಚಿತ್ರದ ಬಗ್ಗೆ ಮಾತನಾಡುತ್ತಾ, “ಇದು ಕೇವಲ ಕ್ರೀಡೆಯಲ್ಲ, ಇದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಚಿತ್ರದಲ್ಲಿ ಕಂಬಳದ ಜೊತೆಗೆ ಮುಂಬೈ ಭೂಗತ ಲೋಕದ ರೋಚಕ ನಂಟನ್ನು ತೋರಿಸಲಾಗಿದೆ” ಎಂದು ಕುತೂಹಲಕಾರಿ ಸುಳಿವು ನೀಡಿದರು. ಇದೇ ಸಂದರ್ಭದಲ್ಲಿ ತುಳು ಆವೃತ್ತಿಯಾದ **‘ಬಿರ್ದ್‌ದ ಕಂಬುಳ’**ದ ಟ್ರೈಲರ್ ಕೂಡ ಬಿಡುಗಡೆಯಾಯಿತು.

ಇನ್ನೂ ಈ ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿದ್ದಾರೆ. ನಟಿ ರಾಧಿಕಾ ನಾರಾಯಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತುಳು ಕಲಾವಿದರಾದ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ತುಳು ರಂಗಭೂಮಿಯ ದಿಗ್ಗಜರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನೂ ತಾಂತ್ರಿಕ ವ ಮಣಿಕಾಂತ್ ಕದ್ರಿ ಸಂಗೀತ, ಆರ್.ಗಿರಿ ಛಾಯಾಗ್ರಹಣ ಹಾಗೂ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ಸಂಭಾಷಣೆ ಚಿತ್ರಕ್ಕಿದೆ. ಇನ್ನೂ ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.