S Shorts

Shocking News | 10 ವರ್ಷಗಳ ಹಳೆಯ ಸಂಬಂಧಕ್ಕೆ ರಕ್ತಸಿಕ್ತ ಅಂತ್ಯ: ಪ್ರಿಯಕರನಿಂದಲೇ ಮಹಿಳೆಯ ಬರ್ಬರ ಹ*ತ್ಯೆ!

Shocking News | 10 ವರ್ಷಗಳ ಹಳೆಯ ಸಂಬಂಧಕ್ಕೆ ರಕ್ತಸಿಕ್ತ ಅಂತ್ಯ: ಪ್ರಿಯಕರನಿಂದಲೇ ಮಹಿಳೆಯ ಬರ್ಬರ ಹ*ತ್ಯೆ!
Author: Sagaradventure
Posted By: Sagaradventure
Updated: Jan 3, 2026 | 5:43 PM

ಯಲ್ಲಾಪುರ(ಉತ್ತರಕನ್ನಡ): ಅನೈತಿಕ ಸಂಬಂಧದ (Illicit relationship) ಕಲಹವೊಂದು ಕೊ*ಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ನಡೆದಿದೆ. ಹತ್ತು ವರ್ಷಗಳಿಂದ ಒಟ್ಟಿಗಿದ್ದ ಪ್ರಿಯಕರನೇ ಮಹಿಳೆಯ ಕುತ್ತಿಗೆಗೆ ಚಾ*ಕು ಇರಿದು ಬರ್ಬರವಾಗಿ ಹ*ತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮೃ*ತ ಮಹಿಳೆಯನ್ನು 31 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆರೋಪಿಯನ್ನು ಯಲ್ಲಾಪುರ ಮೂಲದ ರಫಿಕ್ ಎಂದು ಗುರುತಿಸಲಾಗಿದ್ದು, ಕೃತ್ಯದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.

ಪತಿಯಿಂದ ದೂರವಿದ್ದ ಮಹಿಳೆ: ರಂಜಿತಾ ಅವರು ವಿವಾಹಿತೆಯಾಗಿದ್ದರೂ, ಕೌಟುಂಬಿಕ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಪತಿಯಿಂದ ದೂರವಾಸವಿದ್ದರು. ಈ ನಡುವೆ ಆರೋಪಿ ರಫಿಕ್ ಜೊತೆ ಕಳೆದ ಸುಮಾರು 10 ವರ್ಷಗಳಿಂದ ಅವರು ಸಲುಗೆ ಹೊಂದಿದ್ದರು ಎನ್ನಲಾಗಿದೆ. ರಫೀಕ್ ರಂಜಿತಾಗೆ ವಿವಾಹವಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಮನಸ್ತಾಪ ಮತ್ತು ಜಗಳಗಳು ನಡೆಯುತ್ತಿದ್ದವು ಎಂಬ ಶಂಕೆ ವ್ಯಕ್ತವಾಗಿದೆ.

ಕುತ್ತಿಗೆಗೆ ಚಾ*ಕು ಇರಿದ ಪಾಪಿ: ಘಟನೆಯ ದಿನ ಕಾಳಮ್ಮನಗರದ ಮನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ರಫಿಕ್, ರಂಜಿತಾ ಅವರ ಕುತ್ತಿಗೆಗೆ ಚಾ*ಕುವಿನಿಂದ ಇರಿದಿದ್ದಾನೆ. ತೀವ್ರ ರ*ಕ್ತಸ್ರಾವವಾದ ಪರಿಣಾಮ ರಂಜಿತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿದ ತಕ್ಷಣ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪರಾರಿಯಾಗಿರುವ ಆರೋಪಿ ರಫಿಕ್‌ನಿಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.