S Shorts

IPhone 17 Pro Max ಕೊಡ್ಸಿ ಅಂತ MP ಜಗದೀಶ್ ಶೆಟ್ಟರ್ ಗೆ ಕರೆ ಮಾಡಿದ ಯುವಕ!!

IPhone 17 Pro Max ಕೊಡ್ಸಿ ಅಂತ MP ಜಗದೀಶ್ ಶೆಟ್ಟರ್ ಗೆ ಕರೆ ಮಾಡಿದ ಯುವಕ!!
Author: Meghana Gowda
Posted By: Meghana Gowda
Updated: Dec 1, 2025 | 11:42 AM

ಬೆಳಗಾವಿ: ಸಾಮಾನ್ಯವಾಗಿ ತಮ್ಮ ಪ್ರದೇಶದ ಅಭಿವೃದ್ಧಿ ಅಥವಾ ವೈಯಕ್ತಿಕ ಕೆಲಸಗಳಿಗಾಗಿ ಸಂಸದರು ಮತ್ತು ಜನಪ್ರತಿನಿಧಿಗಳಿಗೆ ಕರೆ ಮಾಡುವ ಪ್ರಜೆಗಳ ನಡುವೆ, ಬೆಳಗಾವಿಯಲ್ಲಿನ ಯುವಕನೊಬ್ಬ ನೇರವಾಗಿ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೇ ಕರೆ ಮಾಡಿ ಐಫೋನ್ (iPhone) ಕೇಳಿದ ಘಟನೆ ವರದಿಯಾಗಿದೆ. ಈ ಕುರಿತ ಆಡಿಯೋ (Audio) ಈಗ ವೈರಲ್ ಆಗಿದೆ.

ಪ್ರತೀಕ್ ಮಲಜಿ ಎಂಬ ಯುವಕ, ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ತನಗೆ ಸಹಾಯ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ. ಸರ್, ನನಗೊಂದು ಹೆಲ್ಪ್ ಆಗಬೇಕು ನಿಮ್ಮಿಂದ. ಸರ್, ಹೊಸದಾದ ಐಫೋನ್ 17 ಪ್ರೋ ಮ್ಯಾಕ್ಸ್ (iPhone 17 Pro Max) ಲಾಂಚ್ ಆಗಿದೆ. ಅದರ ಒಂದು ಪೀಸ್ ನನಗೆ ಬೇಕು ಸರ್, ಎಂದು ಯುವಕ ನೇರವಾಗಿ ಬೇಡಿಕೆ ಇಟ್ಟಿದ್ದಾನೆ. ಯುವಕನ ಈ ಅಚ್ಚರಿಯ ಬೇಡಿಕೆಯನ್ನು ಕೇಳಿ ಸಂಸದ ಜಗದೀಶ್ ಶೆಟ್ಟರ್ ತಬ್ಬಿಬ್ಬಾಗಿದ್ದಾರೆ.

ಎಂಪಿ ಬಳಿ ಇಂತಹವನೆಲ್ಲ ಕೇಳ್ತಿರಾ?” ಎಂದು ಅಚ್ಚರಿಯಿಂದ ಪ್ರಶ್ನಿಸಿದ ಶೆಟ್ಟರ್, ತಕ್ಷಣವೇ ಫೋನ್ ಕಟ್ ಮಾಡಿದ್ದಾರೆ. ಐಷಾರಾಮಿ ಮೊಬೈಲ್ ಫೋನ್‌ಗಾಗಿ ಯುವಕನೊಬ್ಬ ಸಂಸದರಿಗೆ ಕರೆ ಮಾಡಿ ಬೇಡಿಕೆ ಇಟ್ಟಿರುವುದು ಮತ್ತು ಶೆಟ್ಟರ್ ಅವರ ಪ್ರತಿಕ್ರಿಯೆಯ ಆಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.