S Shorts

Davangere ಟಿಕೆಟ್ ಫೈಟ್: ‘ನಾನು ಜಬ್ಬಾರ್ ಹೆಸರು ಹೇಳಿಲ್ಲ’ – ಸಚಿವ ಜಮೀರ್ ಸ್ಪಷ್ಟನೆ!

Davangere ಟಿಕೆಟ್ ಫೈಟ್: ‘ನಾನು ಜಬ್ಬಾರ್ ಹೆಸರು ಹೇಳಿಲ್ಲ’ – ಸಚಿವ ಜಮೀರ್ ಸ್ಪಷ್ಟನೆ!
Author: Sagaradventure
Posted By: Sagaradventure
Updated: Apr 14, 2026 | 11:26 AM

ಬೆಂಗಳೂರು: ದಾವಣಗೆರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇದ್ದಿದ್ದು ನಿಜ, ಆದರೆ ಇದೀಗ ಪಕ್ಷದ ಹಿರಿಯ ನಾಯಕರು ಆ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ನಾಯಕರಿಗೆ ಟಿಕೆಟ್ ಕೈತಪ್ಪಿದ್ದರಿಂದ ಸಹಜವಾಗಿಯೇ ಅಸಮಾಧಾನ ಭುಗಿಲೆದ್ದಿತ್ತು. ಆದರೆ, ನಾನೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೋಗುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಟಿಕೆಟ್ ಹಂಚಿಕೆ ಕುರಿತಂತೆ ತಮ್ಮ ಹೇಳಿಕೆಗಳ ಬಗ್ಗೆ ಎದ್ದಿದ್ದ ಗೊಂದಲಗಳಿಗೂ ಅವರು ತೆರೆ ಎಳೆದಿದ್ದಾರೆ. ‘ನಾನು ಟಿಕೆಟ್‌ಗಾಗಿ ಎಲ್ಲಿಯೂ ಜಬ್ಬಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಲೇ ಇಲ್ಲ. ಜಬ್ಬಾರ್ ಅವರ ಬದಲಿಗೆ, ಪಕ್ಷದ 7 ಪ್ರಮುಖ ಮುಸ್ಲಿಂ ನಾಯಕರ ಹೆಸರುಗಳನ್ನು ನೀಡಿದ್ದೆ. ಆ 7 ಮಂದಿ ಮುಸ್ಲಿಮರಲ್ಲಿ ಯಾರಿಗಾದರೂ ಟಿಕೆಟ್ ಕೊಡಿ ಎಂದು ನಾನು ನಾಯಕರಲ್ಲಿ ಮನವಿ ಮಾಡಿದ್ದೆ’ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. 

ಈ ವಿಚಾರದಲ್ಲಿ ತಾವು ಯಾವುದೇ ಮುಚ್ಚುಮರೆ ಮಾಡಿಲ್ಲ, ಕೆಪಿಸಿಸಿ ಸಭೆಯಲ್ಲಿ ಈ ಬಗ್ಗೆ ಎಲ್ಲರ ಮುಂದೆಯೇ ಓಪನ್ ಆಗಿ ಹೇಳಿದ್ದೆ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.