S Shorts

ನಾಯಕತ್ವ ಬದಲಾವಣೆ ಅಥವಾ ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ- ಸಿಎಂ ಸಿದ್ದು

ನಾಯಕತ್ವ ಬದಲಾವಣೆ ಅಥವಾ ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ- ಸಿಎಂ ಸಿದ್ದು
Author: Rashmi Yadav
Posted By: Rashmi Yadav
Updated: Oct 16, 2025 | 11:34 AM

ಹಾಸನ: ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದರು, “ಆಗಾಗ ಹೀಗೆ ಪಾರ್ಟಿ ಕೊಡುತ್ತಿರುತ್ತೇನೆ, ಆಗಾಗ ಸೇರುತ್ತೀರಿ, ಊಟ ಮಾಡುತ್ತೀರಿ, ಗೆಟ್ ಟುಗೆದರ್ ಮಾಡುತ್ತೇವೆ. ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಟ್ಟರೆ, ಔತಣಕೂಟದಲ್ಲಿ ನಾಯಕತ್ವ ಬದಲಾವಣೆ ಅಥವಾ ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ.”

ಹಾಸನಾಂಬೆ ದೇವಿಯ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ಈಗ ಬಿಹಾರ ಚುನಾವಣೆ ಮೇಲೆ ಗಮನ ಹರಿಸುತ್ತಿದ್ದಾರೆ. ಆಮೇಲೆ ಅವರು ಏನು ಹೇಳುತ್ತಾರೆ ನೋಡೋಣ,” ಎಂದು ಹೇಳಿದ್ದಾರೆ.

ನವೆಂಬರ್‌ನಲ್ಲಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿ ನಡೆಯಲಿದೆ ಎಂಬ ಚರ್ಚೆ ಕುರಿತು, ಸಿದ್ದರಾಮಯ್ಯ ಅವರು ಹೇಳಿದರು, “ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಯಾವ ಶಾಸಕರೂ ಅಪಸ್ವರ ಅಥವಾ ಕೂಗು ಎತ್ತುತ್ತಿಲ್ಲ. ಎಲ್ಲವನ್ನೂ ನೀವು ಊಹಿಸುತ್ತಿದ್ದೀರಷ್ಟೆ.”

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನಿಷೇಧದ ವಿಚಾರ ಕೇಳಿದಾಗ, ಅವರು ಹೇಳಿದರು, “ಆರ್‌ಎಸ್‌ಎಸ್ ಮಾತ್ರವಲ್ಲ, ಯಾವುದೇ ಸಂಘಟನೆಗಳು ಶಾಲೆ, ಕಾಲೇಜು ಆವರಣ, ಪಾರ್ಕ್ ಅಥವಾ ಸಾರ್ವಜನಿಕ ಜಾಗಗಳಲ್ಲಿ ಜನರಿಗೆ ತೊಂದರೆ ಉಂಟುಮಾಡುವ ರೀತಿಯ ಕಾರ್ಯಕ್ರಮ ನಡೆಸಬಾರದು. ತಮಿಳುನಾಡು ಸರ್ಕಾರ ಹೇಗೆ ನಿಷೇಧ ಹೇರಿದೆ ಎಂಬ ವರದಿ ತರಿಸಿಕೊಳ್ಳುತ್ತಿದ್ದೇವೆ.”