S Shorts

ಶೀಲ ಶಂಕಿಸಿ ಪತ್ನಿ ಹಾಗೂ 7 ತಿಂಗಳ ಹಸುಗೂಸನ್ನು ಸುತ್ತಿಗೆಯಿಂದ ಜಜ್ಜಿ ಕೊಂ*ದ ಪಾಪಿ ಪತಿ ಅರೆಸ್ಟ್

ಶೀಲ ಶಂಕಿಸಿ ಪತ್ನಿ ಹಾಗೂ 7 ತಿಂಗಳ ಹಸುಗೂಸನ್ನು ಸುತ್ತಿಗೆಯಿಂದ ಜಜ್ಜಿ ಕೊಂ*ದ ಪಾಪಿ ಪತಿ ಅರೆಸ್ಟ್
Author: Sagaradventure
Posted By: Sagaradventure
Updated: Jul 31, 2026 | 2:03 PM

ಬಳ್ಳಾರಿ ನಗರದ ಅಂದ್ರಾಳು ಏರಿಯಾದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದ್ದು, ಪತ್ನಿ ಹಾಗೂ ಏಳು ತಿಂಗಳ ಹಸುಗೂಸನ್ನು ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ. ರಾಜೇಶ್ವರಿ (25) ಹಾಗೂ ಮಗು ಅಶ್ವಿನಿ ಕೊ*ಲೆಯಾದ ದುರ್ದೈವಿಗಳು. ಪತ್ನಿಯ ಶೀಲ ಶಂಕಿಸಿದ ಪಾಪಿ ಪತಿ ಹೊನ್ನೂರಸ್ವಾಮಿ ಈ ಕೃತ್ಯವೆಸಗಿದ್ದು, ಈ ಭೀಕರ ದೃಶ್ಯ ಕಂಡು ಅಂದ್ರಾಳು ಏರಿಯಾದ ಜನತೆ ಬೆಚ್ಚಿಬಿದ್ದಿದ್ದಾರೆ.

​ಮಲಗಿದ್ದಾಗ ಸುತ್ತಿಗೆಯಿಂದ ಬರ್ಬರ ಹ*ತ್ಯೆ

​ಆರೋಪಿ ಹೊನ್ನೂರಸ್ವಾಮಿ ಹಾಗೂ ರಾಜೇಶ್ವರಿ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಪತ್ನಿಯ ಮೇಲೆ ಆಗಾಗ ಅನುಮಾನಗೊಂಡು ಆಕೆಯೊಂದಿಗೆ ಹೊನ್ನೂರಸ್ವಾಮಿ ನಿರಂತರವಾಗಿ ಜಗಳವಾಡುತ್ತಿದ್ದನು. ಇದೇ ದ್ವೇಷದ ಹಿನ್ನೆಲೆಯಲ್ಲಿ, ರಾತ್ರಿ ಮನೆಯಲ್ಲಿ ತಾಯಿ ಮತ್ತು ಮಗು ಮಲಗಿದ್ದ ವೇಳೆ ಅವರ ತಲೆ ಭಾಗಕ್ಕೆ ಸುತ್ತಿಗೆಯಿಂದ ಮನಬಂದಂತೆ ಹೊಡೆದು ಕ್ರೂರವಾಗಿ ಹ*ತ್ಯೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

​ಆರೋಪಿ ಸೆರೆ, ಪೊಲೀಸರಿಂದ ತೀವ್ರ ವಿಚಾರಣೆ

​ಪತ್ನಿ ಮತ್ತು ಮಗುವನ್ನು ಕೊ*ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದ ಆರೋಪಿ ಹೊನ್ನೂರಸ್ವಾಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಳ್ಳಾರಿಯ ಎಪಿಎಂಸಿ (APMC) ಪೊಲೀಸ್ ಠಾಣೆಯ ಅಧಿಕಾರಿಗಳು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.