S Shorts

Football ಮೈದಾನದಲ್ಲಿ ಭೀಕರ ದುರಂತ: ಗೋಲ್‌ಕೀಪರ್‌ಗೆ ಡಿಕ್ಕಿಯಾಗಿ Spain ಆಟಗಾರ ಜೀಸಸ್ ಡಿ ಮಿಗುಯೆಲ್ ಸಾ*ವು!

Football ಮೈದಾನದಲ್ಲಿ ಭೀಕರ ದುರಂತ: ಗೋಲ್‌ಕೀಪರ್‌ಗೆ ಡಿಕ್ಕಿಯಾಗಿ Spain ಆಟಗಾರ ಜೀಸಸ್ ಡಿ ಮಿಗುಯೆಲ್ ಸಾ*ವು!
Author: Sagaradventure
Posted By: Sagaradventure
Updated: Nov 3, 2026 | 5:04 PM

ಸ್ಪೇನ್‌ನ ಸೆಕೆಂಡ್ ಡಿವಿಷನ್ ಫುಟ್ಬಾಲ್ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಭೀಕರ ಅಪಘಾತದಲ್ಲಿ ಟೆನೆರೈಫ್ (Tenerife) ಕ್ಲಬ್‌ನ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಮೃ*ತಪಟ್ಟಿರುವ ದಾರುಣ ಘಟನೆ ನಡೆದಿದೆ. ಎಫ್‌ಸಿ ಅಂಡೋರಾ (FC Andorra) ತಂಡದ ಗೋಲ್‌ಕೀಪರ್ ಜೊತೆ ಮೈದಾನದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ್ದಾರೆ. 2026ರ ನವೆಂಬರ್ 3ರ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಜೀಸಸ್ ಡಿ ಮಿಗುಯೆಲ್ ಮೃ*ತಪಟ್ಟಿರುವುದಾಗಿ ಟೆನೆರೈಫ್ ಕ್ಲಬ್ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಪಂದ್ಯದ ಅಂತಿಮ ಹಂತದಲ್ಲಿ ಈ ದುರಂತ ಸಂಭವಿಸಿದೆ. ಎಫ್‌ಸಿ ಅಂಡೋರಾ ತಂಡದ ಗೋಲ್‌ಕೀಪರ್, ಈಕ್ವಟೋರಿಯಲ್ ಗಿನಿಯಾ ಅಂತಾರಾಷ್ಟ್ರೀಯ ಆಟಗಾರ ಜೀಸಸ್ ಓವೊನೊ ಅವರು ತಮ್ಮ ಗೋಲ್ ಪೋಸ್ಟ್‌ನಿಂದ ವೇಗವಾಗಿ ಓಡಿಬಂದು ಮೈದಾನದ ಮಧ್ಯಭಾಗದಲ್ಲಿ ಜೀಸಸ್ ಡಿ ಮಿಗುಯೆಲ್ ಅವರಿಗೆ ಅಪ್ಪಳಿಸಿದ್ದರು. 

ಡಿಕ್ಕಿಯ ರಭಸಕ್ಕೆ ಮಿಗುಯೆಲ್ ಮೈದಾನದಲ್ಲೇ ಕುಸಿದುಬಿದ್ದಿದ್ದರಿಂದ ತಕ್ಷಣವೇ ಆಟವನ್ನು ರದ್ದುಗೊಳಿಸಲಾಯಿತು. ಈ ಸುದ್ದಿ ಇದೀಗ ಇಡೀ ಫುಟ್ಬಾಲ್ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಸ್ಪ್ಯಾನಿಷ್ ಮಾಧ್ಯಮಗಳ ವರದಿ ಪ್ರಕಾರ, ಮೈದಾನದಲ್ಲಿ ಗಾಯಗೊಂಡ ಜೀಸಸ್ ಡಿ ಮಿಗುಯೆಲ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹೃದಯಾಘಾತ (Cardiac arrest) ಸಂಭವಿಸಿತ್ತು. ತಕ್ಷಣವೇ ವೈದ್ಯರು ಅವರನ್ನು ಬದುಕಿಸುವ ತೀವ್ರ ಪ್ರಯತ್ನ ಮಾಡಿದ್ದರಾದರೂ, ಅದು ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

“ಈ ಅಪಾರ ದುಃಖವನ್ನು ಕಡಿಮೆ ಮಾಡಲು ಯಾವುದೇ ಪದಗಳಿಲ್ಲ, ಅವರ ಕುಟುಂಬ, ಆಪ್ತರು ಹಾಗೂ ಅಭಿಮಾನಿಗಳ ಜೊತೆ ನಾವಿದ್ದೇವೆ” ಎಂದು ಟೆನೆರೈಫ್ ಕ್ಲಬ್ ತನ್ನ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದೆ.