S Shorts

BJP ವಿಜಯೋತ್ಸವ: ಕಾಂಗ್ರೆಸ್ ಸಚಿವರ ಕ್ಷೇತ್ರಗಳಲ್ಲೂ ಕೇಸರಿ ಕಮಾಲ್..!

BJP ವಿಜಯೋತ್ಸವ: ಕಾಂಗ್ರೆಸ್ ಸಚಿವರ ಕ್ಷೇತ್ರಗಳಲ್ಲೂ ಕೇಸರಿ ಕಮಾಲ್..!
Author: Meghana Gowda
Posted By: Meghana Gowda
Updated: Dec 25, 2025 | 12:50 PM

ಬೆಂಗಳೂರು : ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನ್ನಲಾಗುವ ಸಚಿವರುಗಳ ಕ್ಷೇತ್ರ ವ್ಯಾಪ್ತಿಯಲ್ಲೂ ಬಿಜೆಪಿ ಕೇಸರಿ ಪತಾಕೆ ಹಾರಿಸುವ ಮೂಲಕ ಭರ್ಜರಿ ಕಮಾಲ್ ಮಾಡಿದೆ. ಈ ಜಯವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಹೊಸ ಆನೆಯ ಬಲ ತಂದಿದೆ.

ಕಾಂಗ್ರೆಸ್ ಸಚಿವರುಗಳ ಪ್ರಭಾವ ಇರುವ ಕ್ಷೇತ್ರಗಳಲ್ಲೂ ಬಿಜೆಪಿ (BJP ) ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ . ಕರಾವಳಿ ಭಾಗದಲ್ಲಿ ತನ್ನ ಹಿಡಿತ ಮುಂದುವರಿಸಿರುವ ಬಿಜೆಪಿ, ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.

ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಯಶಸ್ಸು ಬಿ.ವೈ. ವಿಜಯೇಂದ್ರ ಅವರ ನೇತೃತ್ವಕ್ಕೆ ಸಿಕ್ಕ ದೊಡ್ಡ ಜಯವೆಂದು ವಿಶ್ಲೇಷಿಸಲಾಗುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆಯ ಕುರಿತು ಕೇಳಿಬರುತ್ತಿದ್ದ ಮಾತುಗಳಿಗೆ ಈ ಚುನಾವಣಾ ಫಲಿತಾಂಶ ಬ್ರೇಕ್ ಹಾಕುವ ಸಾಧ್ಯತೆಯಿದೆ.