S Shorts

ಕನ್ನಡ ಹೋರಾಟಗಾರರ ಮೇಲಿನ ಕೇಸ್‌ ವಾಪಸ್!‌ ಸಿಎಂ ಘೋಷಣೆ

ಕನ್ನಡ ಹೋರಾಟಗಾರರ ಮೇಲಿನ ಕೇಸ್‌ ವಾಪಸ್!‌ ಸಿಎಂ ಘೋಷಣೆ
Author: StateNews Desk
Posted By: StateNews Desk
Updated: Nov 1, 2025 | 12:43 PM

ಬೆಂಗಳೂರು: 70ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiha) ಅವರು ಕನ್ನಡ ಹೋರಾಟಗಾರರಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದಾಗ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಿದ್ದರು. ಈಸಂಜೆ ವೆಂಟಕೇಶ್‌ ಹಾಗೂ ಗೋವಿಂದು ಅವರು ಯಾವಾಗಲೂ ನನ್ನ ಬಳಿ ಬರುತ್ತಿದ್ದರು. ಒಮ್ಮೆ ಸಭೆಯಲ್ಲಿ ರಾಮಕೃಷ್ಣ ಹೆಗಡೆಯವರನ್ನೇ ದಬಾಯಿಸಿದ್ದರು ಎಂದು ನೆನಪಿಸಿಕೊಂಡರು.

ಕನ್ನಡ ಪರ ಹೋರಾಟಗಾರರು ಕನ್ನಡದ ಹೋರಾಟಗಳನ್ನು ಮುಂದುವರಿಸಿ; ಶುಭವಾಗಲಿ. ವಾಟಾಳ್‌ ನಾಗರಾಜ್‌ ಅವರು ನನ್ನ ಮೇಲೆ ಕನ್ನಡ ಪರ ಹೋರಾಟ ನಡೆಸಿದ್ದಕ್ಕೆ ಕೇಸ್‌ಗಳಿವೆ. ಅವುಗಳನ್ನ ವಾಪಾಸ್‌ ಪಡೆಯಬೇಕು ಎಂದಿದ್ದಾರೆ. ಕೇಸ್‌ಗಳನ್ನು ವಾಪಸ್‌ ಪಡೆಯುತ್ತೇವೆ ಎಂದು ಘೋಷಿಸಿದ್ದಾರೆ.