S Shorts

ವಿದೇಶಿ ಬಿಸ್ಕೆಟ್, ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಬೆಂಗಳೂರಿಗೆ ಬರ್ತಿತ್ತು ಗಾಂಜಾ!!

ವಿದೇಶಿ ಬಿಸ್ಕೆಟ್, ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಬೆಂಗಳೂರಿಗೆ ಬರ್ತಿತ್ತು ಗಾಂಜಾ!!
Author: StateNews Desk
Posted By: StateNews Desk
Updated: Oct 23, 2025 | 7:21 AM

ಬೆಂಗಳೂರು: ಸಿಸಿಬಿ (CCB) ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ₹ 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು (Drugs) ವಶಪಡಿಸಿಕೊಂಡಿದ್ದಾರೆ.

ಕೆ.ಜಿ. ನಗರ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಛೇರಿಗೆ (Post Office) ಥೈಲ್ಯಾಂಡ್‌ನಿಂದ ಅನುಮಾನಾಸ್ಪದ ಪಾರ್ಸೆಲ್‌ಗಳು ಬರುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪಿಐ ಶ್ರೀ ರಕ್ಷಿತ್.ಎ.ಕೆ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಶ್ವಾನದಳದ ಸಹಾಯದಿಂದ ಅನುಮಾನಾಸ್ಪದ ಪಾರ್ಸೆಲ್‌ಗಳನ್ನು ಪರಿಶೀಲಿಸಿದಾಗ, ವಿದೇಶಿ ಕಂಪನಿಗಳ ಬಿಸ್ಕೆಟ್ ಮತ್ತು ಚಾಕೊಲೇಟ್ ಪ್ಯಾಕೆಟ್‌ಗಳೊಳಗೆ ಮರೆಮಾಚಿದ್ದ 3 ಕೆಜಿ ನಿಷೇಧಿತ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ₹ 3 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಅಕ್ರಮ ಸಾಗಾಟದ ವಿರುದ್ಧ ಕೆ.ಜಿ. ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ಸ್ (Drugs) ಆಮದು ಮಾಡಿಕೊಂಡ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.