S Shorts

Chikkamagaluru | ರಾತ್ರೋರಾತ್ರಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ದಿಢೀರ್ ವರ್ಗಾವಣೆ; ಶೃಂಗೇರಿ ಅಂಚೆಮತ ಮರು ಎಣಿಕೆ ಎಫೆಕ್ಟಾ?

Chikkamagaluru | ರಾತ್ರೋರಾತ್ರಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ದಿಢೀರ್ ವರ್ಗಾವಣೆ; ಶೃಂಗೇರಿ ಅಂಚೆಮತ ಮರು ಎಣಿಕೆ ಎಫೆಕ್ಟಾ?
Author: Meghana Gowda
Posted By: Meghana Gowda
Updated: May 19, 2026 | 1:05 PM

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಧಿಕಾರಿ (Deputy Commissioner) ಎನ್.ಎಂ. ನಾಗರಾಜ್ (N.M. Nagaraj) ಅವರನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಜಿಲ್ಲೆಯಲ್ಲಿ ತೀವ್ರ ಕುತೂಹಲ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರ ವರ್ಗಾವಣೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಇತ್ತೀಚೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ  ಅಂಚೆ ಮತಗಳ ಮರು ಎಣಿಕೆ ವಿಚಾರ ಭಾರಿ ಸದ್ದು ಮಾಡಿತ್ತು. ಈ ವಿವಾದವೇ ಡಿಸಿ ಅವರ ವರ್ಗಾವಣೆಗೆ ಕಾರಣವಾಯಿತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೆ ರಾತ್ರೋರಾತ್ರಿ ಡಿಸಿ ಅವರನ್ನು ಎತ್ತಂಗಡಿ ಮಾಡಿರುವುದು ಹಲವು ಅನುಮಾನಗಳಿಗೆ (Several suspicions) ಎಡೆಮಾಡಿಕೊಟ್ಟಿದೆ. ಆಡಳಿತಾತ್ಮಕ ಕಾರಣಗಳಿಗಿಂತ ರಾಜಕೀಯ ಒತ್ತಡವೇ (Political pressure) ಈ ವರ್ಗಾವಣೆಯ ಹಿಂದೆ ಕೆಲಸ ಮಾಡಿದೆಯಾ ಎಂಬ ಚರ್ಚೆ ಶುರುವಾಗಿದೆ.

ಮೂಲಗಳ ಪ್ರಕಾರ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ (District in-charge minister K.J. George) ಅವರಿಂದ ಜಿಲ್ಲೆಯ ವಿದ್ಯಮಾನಗಳ ಬಗ್ಗೆ ಮಾಹಿತಿ ಹಾಗೂ ವರದಿ ಪಡೆದ ಬಳಿಕವೇ ರಾಜ್ಯ ಸರ್ಕಾರ ಈ ದಿಢೀರ್ ವರ್ಗಾವಣೆ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.