S Shorts

ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರ ದಾರುಣ ಸಾ*ವು, ಮಹಿಳೆಗೆ ಗಂಭೀರ ಗಾಯ!

ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರ ದಾರುಣ ಸಾ*ವು, ಮಹಿಳೆಗೆ ಗಂಭೀರ ಗಾಯ!
Author: Sagaradventure
Posted By: Sagaradventure
Updated: Sep 20, 2026 | 5:40 PM

ಹುಬ್ಬಳ್ಳಿಯ ಹಳೇಹುಬ್ಬಳ್ಳಿ ವ್ಯಾಪ್ತಿಯ ಅಯೋಧ್ಯಾನಗರದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಡುಗೆ ಅನಿಲ (LPG) ಸಿಲಿಂಡರ್ ಸ್ಫೋಟದಲ್ಲಿ ಇಬ್ಬರು ದಾರುಣವಾಗಿ ಸಾ*ವನ್ನಪ್ಪಿದ್ದು, ಓರ್ವ ಮಹಿಳೆ ತೀವ್ರವಾಗಿ ಸುಟ್ಟು ಗಾಯಗೊಂಡಿರುವ ದುರ್ಘಟನೆ ವರದಿಯಾಗಿದೆ. 

ಈ ಭೀಕರ ಅವಘಡದಲ್ಲಿ ಹಳೇಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ನಿವಾಸಿ ಹಾಗೂ ಕೆಇಬಿ (KEB) ನೌಕರರಾಗಿರುವ 46 ವರ್ಷದ ಪ್ರವೀಣ ಮೋತಿ ಕಲಾಲ ಅವರು ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಫೋಟಗೊಂಡ ಮನೆಯಲ್ಲಿದ್ದ ಅಯೋಧ್ಯಾನಗರದ ನಿವಾಸಿ 48 ವರ್ಷದ ಮೋಹನ ಕಲಾಲ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸುಟ್ಟ ಗಾಯಗಳ ಪ್ರಮಾಣ ಹೆಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಬೆಳಗ್ಗೆ ಕೆಎಂಸಿಆರ್‌ಐ (KMCRI) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಇದೇ ದುರಂತದಲ್ಲಿ ಮೋಹನ ಅವರ ಪತ್ನಿ ಸುಮನ ಕಲಾಲ ಅವರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಅವರು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.