S Shorts

Davanagere | ಸರ್ಕಾರಿ ಉದ್ಯೋಗ ಸಿಗಲಿಲ್ಲ ಎಂದು 26 ವರ್ಷದ ಯುವಕ ಆತ್ಮಹ*ತ್ಯೆ

Davanagere | ಸರ್ಕಾರಿ ಉದ್ಯೋಗ ಸಿಗಲಿಲ್ಲ ಎಂದು 26 ವರ್ಷದ ಯುವಕ ಆತ್ಮಹ*ತ್ಯೆ
Author: Meghana Gowda
Posted By: Meghana Gowda
Updated: Dec 10, 2025 | 7:45 AM

ದಾವಣಗೆರೆ: ಸರ್ಕಾರಿ ಉದ್ಯೋಗ (Government Job) ದೊರೆಯದ ಕಾರಣಕ್ಕೆ ಮನನೊಂದಿದ್ದ 26 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ (Suicide) ಶರಣಾದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಲಿಂಗಣ್ಣ ಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕನನ್ನು ಆಂಜಿನಪ್ಪ (Anjinappa) ಎಂದು ಗುರುತಿಸಲಾಗಿದೆ. ಆಂಜಿನಪ್ಪ ಅವರು ಮನೆಯಲ್ಲಿಯೇ ಉಳಿದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ಸಿದ್ಧತೆ ನಡೆಸುತ್ತಿದ್ದರು. ಹಲವು ಪರೀಕ್ಷೆಗಳನ್ನು ಬರೆದಿದ್ದರೂ ನಿರೀಕ್ಷೆಯಂತೆ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಷ್ಟೊತ್ತಾದರೂ ಆಂಜಿನಪ್ಪ ಕೊಠಡಿಯಿಂದ ಹೊರಗೆ ಬರದಿದ್ದಾಗ, ಕುಟುಂಬದ ಸದಸ್ಯರು ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ದಾವಣಗೆರೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ (Bilichodu Police Station) ಪ್ರಕರಣ ದಾಖಲಾಗಿದೆ.