S Shorts

Bigg Boss Winner Gilli: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಸಿಕ್ಕ ಒಟ್ಟಾರೆ ಉಡುಗೊರೆ ಎಷ್ಟು ಗೊತ್ತಾ?

Bigg Boss Winner Gilli: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಸಿಕ್ಕ ಒಟ್ಟಾರೆ ಉಡುಗೊರೆ ಎಷ್ಟು ಗೊತ್ತಾ?
Author: Meghana Gowda
Posted By: Meghana Gowda
Updated: Jan 19, 2026 | 4:21 AM

ಬೆಂಗಳೂರು: ಸತತ 100ಕ್ಕೂ ಹೆಚ್ಚು ದಿನಗಳ ಕಾಲ ಕೋಟ್ಯಂತರ ಕನ್ನಡಿಗರನ್ನು ರಂಜಿಸಿದ ‘ಬಿಗ್ ಬಾಸ್ (Bigg-Boss) ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಅದ್ದೂರಿ ತೆರೆ ಬಿದ್ದಿದೆ. ಜನರ ನಿರೀಕ್ಷೆಯಂತೆ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಪ್ರತಿಭೆ ‘ಗಿಲ್ಲಿ’ ನಟ (ನಟರಾಜ್) ಈ ಬಾರಿಯ ವಿನ್ನರ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಬರೋಬ್ಬರಿ 40 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದರೆ ತಪ್ಪಾಗದು.

ಮಂಡ್ಯದ ಮಾದಪುರದಿಂದ ಬಿಗ್ ಬಾಸ್ ವೇದಿಕೆಯವರೆಗೆ:

ಗಿಲ್ಲಿ (Gilli)  ನಟ ಅವರ ಈ ಪಯಣ ಸುಲಭದ್ದಾಗಿರಲಿಲ್ಲ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಾಪುರ ಗ್ರಾಮದ ಕಡು ಬಡತನದ ರೈತ ಕುಟುಂಬದಲ್ಲಿ ಜನಿಸಿದ ಇವರು, ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಬೆಂಗಳೂರಿಗೆ ಬಂದವರು.

ಆರಂಭದಲ್ಲಿ ಶೂಟಿಂಗ್ ಸೆಟ್‌ಗಳಲ್ಲಿ ‘ಸೆಟ್ ಬಾಯ್’ ಆಗಿ ಕೆಲಸ ಮಾಡುತ್ತಿದ್ದ ಇವರು, ನಂತರ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಾಸ್ಯದ ವಿಡಿಯೋಗಳ ಮೂಲಕ ‘ಗಿಲ್ಲಿ ನಟ’ ಎಂದೇ ಖ್ಯಾತಿ ಪಡೆದರು. ತಮ್ಮ ಹಳ್ಳಿ ಸೊಗಡಿನ ಮುಗ್ಧ ಮಾತುಗಳಿಂದಲೇ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕಾರ್ಯವೈಖರಿ:

ಹಾಸ್ಯದ ಮೂಲಕ ಎಲ್ಲರವನ್ನು ರಂಜಿಸಿ ನಗಿಸುತ್ತಿದ್ದ ಗಿಲ್ಲಿ, ಬಿಗ್‌ ಬಾಸ್‌ ಮನೆಯೊಳಗೆ ಬಂದ ಮೇಲು ಯಾವುದೇ ಮುಖವಾಡವಿಲ್ಲದೆ ನೈಜವಾಗಿ ಆಡಿದ್ದು, ಜನರ ಮನ ಗೆಲ್ಲಲು ಮುಖ್ಯ ಕಾರಣ.

ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಅವರ ಕಾಲೆಳೆಯುತ್ತಾ ಇಡೀ ಮನೆಯ ವಾತಾವರಣವನ್ನು ಹಗುರವಾಗಿಡುತ್ತಿದ್ದರು. ದೈಹಿಕ ಟಾಸ್ಕ್‌ಗಳಿಗಿಂತ ಬುದ್ಧಿವಂತಿಕೆಯನ್ನು ಬಳಸಿ ಎದುರಾಳಿಗಳನ್ನು ಮಣಿಸುತ್ತಿದ್ದ ಇವರು, ಉತ್ತಮ ನಾಯಕತ್ವದ ಗುಣಗಳನ್ನೂ ಪ್ರದರ್ಶಿಸುವುದರ ಮೂಲಕ  ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.

ಗಿಲ್ಲಿಗೆ ಒಲಿದ ಒಟ್ಟು ಬಹುಮಾನಗಳು:

ವಿನ್ನರ್ ಘೋಷಣೆಯಾದ ಬೆನ್ನಲ್ಲೇ ಗಿಲ್ಲಿ ಅವರಿಗೆ ಘೋಷಣೆಯಾಗಿರುವ ಬಹುಮಾನಗಳ ಮೊತ್ತ ನಿಜಕ್ಕೂ ಬಂಪರ್.  ಬಿಗ್ ಬಾಸ್ ನಿಂದ ₹50 ಲಕ್ಷ ರೂ. ಕಿಚ್ಚ ಸುದೀಪ್ (Kiccha Sudeep) ತಮ್ಮ ವೈಯಕ್ತಿಕವಾಗಿ ₹10 ಲಕ್ಷ ಉಡುಗೊರೆ ನೀಡಿದ್ದಾರೆ. ಹಾಗೂ ಗಿಲ್ಲಿ ಗೆದ್ದರೆ ₹20 ಲಕ್ಷ ನೀಡುವುದಾಗಿ ಜೆಡಿಎಸ್ ಎಂಎಲ್ ಸಿ ಟಿ.ಎ. ಶರವಣ (TA Sharavana) ಈ ಮೊದಲೇ ತಿಳಿಸಿದ್ದರು. ಮತ್ತು ಸುಮಾರು ₹20 ಲಕ್ಷ ಮೌಲ್ಯದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡ ಅವರಿಗೆ ಸಿಕ್ಕಿದೆ.

₹50 ಲಕ್ಷದಲ್ಲಿ ಗಿಲ್ಲಿ ಕೈಗೆ ಸಿಗುವ ನಿಕರ ಮೊತ್ತವೆಷ್ಟು?

ಬಿಗ್ ಬಾಸ್ ವೇದಿಕೆಯ ಮೇಲೆ ₹50 ಲಕ್ಷದ ಚೆಕ್ ನೀಡಲಾಗಿದ್ದರೂ, ತೆರಿಗೆ ಕಡಿತದ ನಂತರ ಗಿಲ್ಲಿಯ ಕೈಗೆ ಸಿಗುವ ಹಣ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಒಟ್ಟೂ ಹಣದಲ್ಲಿ ಶೇ. 30ರಷ್ಟು ಹಣ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ, ಅಂದರೆ ₹15 ಲಕ್ಷ ನೇರ ತೆರಿಗೆ. ಮತ್ತು ತೆರಿಗೆ ಮೊತ್ತದ ಮೇಲೆ 4% ಆರೋಗ್ಯ ಮತ್ತು ಶಿಕ್ಷಣ ಸೆಸ್‌ಗೆ ಎಂದು 60,000 ಸಾವಿರದಂತೆ ಒಟ್ಟು₹15.6 ಲಕ್ಷ ತೆರಿಗೆಯಾಗಿ ಹೋಗಲಿದೆ. ಈ ಎಲ್ಲಾ ತೆರಿಗೆ ಕಡಿತದ ನಂತರ ₹50 ಲಕ್ಷದಲ್ಲಿ ಗಿಲ್ಲಿಗೆ ನಿಕರವಾಗಿ ಸುಮಾರು ₹34.4 ಲಕ್ಷ ಮಾತ್ರ ಕೈಗೆ ಸಿಗಲಿದೆ.

ಇ‌ಷ್ಟೇ ಅಲ್ಲದೇ ಸುದೀಪ್ ಅವರು ನೀಡಿದ ₹10 ಲಕ್ಷ ಮತ್ತು ಟಿ.ಎ. ಶರವಣ ಅವರು ನೀಡುವ ₹20 ಲಕ್ಷದಲ್ಲೂ ಕೂಡ ತೆರಿಗೆ ಕಟ್ಟಾಗುತ್ತದೆ.

ರನ್ನರ್ ಅಪ್ ಆಗಿ ಮಿಂಚಿದ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿಗೆ ಒಟ್ಟು 25 ಲಕ್ಷ ಬಹುಮಾನ ಸಿಕ್ಕಿದೆ. ಇದರಲ್ಲಿ ಸರ್ಕಾರದ ಟ್ಯಾಕ್ಸ್ ಕಟ್ ಆಗಿ ಕೇವಲ 17,50,000 ಸಿಗಲಿದೆ.