S Shorts

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ Good News; 3 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸಿಗಲಿದೆ ಗುರುತಿನ ಚೀಟಿ

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ Good News; 3 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸಿಗಲಿದೆ ಗುರುತಿನ ಚೀಟಿ
Author: Meghana Gowda
Posted By: Meghana Gowda
Updated: Feb 11, 2026 | 10:29 AM

ಬೆಂಗಳೂರು: ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ (Street Vendors) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ದೀರ್ಘಕಾಲದ ಸಮೀಕ್ಷೆಯ ನಂತರ ಅರ್ಹ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ ಚೀಟಿ (Identity Card) ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

20.09.2024 ರಿಂದ 06.01.2025 ರವರೆಗೆ ಸರ್ಕಾರದ ವಿಶೇಷ ಆಪ್ ಮೂಲಕ ಸಮಗ್ರ ಸಮೀಕ್ಷೆ ನಡೆಸಲಾಗಿತ್ತು. ಮಾರ್ಷಲ್‌ಗಳು, ಆರೋಗ್ಯ ಪರಿವೀಕ್ಷಕರು ಮತ್ತು ಸಿಆರ್‌ಪಿ (CRP) ತಂಡಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದವು. ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ಸಾಂಕೇತಿಕವಾಗಿ 15 ಮಂದಿಗೆ ಗುರುತಿನ ಚೀಟಿ (ID cards) ನೀಡುವ ಮೂಲಕ ಚಾಲನೆ ನೀಡುವುದರ ಮೂಲಕ ಒಟ್ಟು 3,802 ವ್ಯಾಪಾರಿಗಳಿಗೆ ಈ ಕಾರ್ಡ್‌ಗಳನ್ನು ನೀಡಲಾಗುತ್ತಿದೆ.

ಪಾಲಿಕೆಯ ಕಟ್ಟುನಿಟ್ಟಿನ ಸೂಚನೆಗಳು:

ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಇನ್ನು ಮುಂದೆ ವ್ಯಾಪಾರ ಮಾಡಲು ಅವಕಾಶವಿರುತ್ತದೆ. ಕಚೇರಿಗೆ ಅಲೆಯುವ ಅವಶ್ಯಕತೆಯಿಲ್ಲದೆ, ಉಳಿದ ವ್ಯಾಪಾರಿಗಳಿಗೆ ಅವರವರ ವ್ಯಾಪಾರ ಸ್ಥಳಗಳಲ್ಲೇ ಕಾರ್ಡ್ ತಲುಪಿಸಲಾಗುತ್ತದೆ. ಗುರುತಿನ ಚೀಟಿ ಧರಿಸುವುದು ಕಡ್ಡಾಯವಾಗಿದ್ದು, ಕಾರ್ಡ್ ಇಲ್ಲದೆ ವ್ಯಾಪಾರ ಮಾಡುವವರ ವಿರುದ್ಧ ಪಾಲಿಕೆ ಕಾನೂನು ಕ್ರಮ ಕೈಗೊಳ್ಳಲಿದೆ.

ಈ ಸಮಾರಂಭದಲ್ಲಿ ಅಪರ ಆಯುಕ್ತ ನವೀನ್ ಕುಮಾರ್ ರಾಜು, ಜಂಟಿ ಆಯುಕ್ತ ಮಧು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.