S Shorts

ಮದ್ಯ ಪ್ರಿಯರಿಗೆ ಗುಡ್​​​​ನ್ಯೂಸ್; Namma Metroದಲ್ಲಿ ಮದ್ಯದ ಬಾಟಲಿ ಸಾಗಿಸಲು ಗ್ರೀನ್ ಸಿಗ್ನಲ್?

ಮದ್ಯ ಪ್ರಿಯರಿಗೆ ಗುಡ್​​​​ನ್ಯೂಸ್; Namma Metroದಲ್ಲಿ ಮದ್ಯದ ಬಾಟಲಿ ಸಾಗಿಸಲು ಗ್ರೀನ್ ಸಿಗ್ನಲ್?
Author: Meghana Gowda
Posted By: Meghana Gowda
Updated: Feb 20, 2026 | 9:54 AM

ಬೆಂಗಳೂರು: ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ (Namma Metro) ಇನ್ನು ಮುಂದೆ ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು (Liquor Bottles)ತೆಗೆದುಕೊಂಡು ಹೋಗಲು ಅವಕಾಶ ಸಿಗುವ ಸಾಧ್ಯತೆ ಇದೆ. ದೆಹಲಿ ಮೆಟ್ರೋದ ಏರ್‌ಪೋರ್ಟ್ ಲೈನ್ ಮಾದರಿಯನ್ನು ಅನುಸರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗಂಭೀರವಾಗಿ ಆಲೋಚಿಸುತ್ತಿದೆ.

ಏನಿದು ಹೊಸ ಯೋಜನೆ?

ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಯಾವುದೇ ರೀತಿಯ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಆದರೆ, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿರುವ ಸಿಲ್ಕ್ ಬೋರ್ಡ್ – ಹೆಬ್ಬಾಳ – ಏರ್‌ಪೋರ್ಟ್ ಮಾರ್ಗದಲ್ಲಿ ಮದ್ಯ ಪ್ರಿಯರಿಗೆ ಈ ರಿಯಾಯಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರು ಹೆಚ್ಚಾಗಿ ಮದ್ಯದ ಬಾಟಲಿಗಳನ್ನು ತರುವುದರಿಂದ, ಮೆಟ್ರೋದಲ್ಲಿ ಅವಕಾಶ ನೀಡಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಇಲಾಖೆಯ ಲೆಕ್ಕಾಚಾರ.

ವಿಧಿಸಲಾಗುವ ಪ್ರಮುಖ ಷರತ್ತುಗಳು (Conditions):

ಮದ್ಯ ಸಾಗಿಸಲು ಅವಕಾಶ ನೀಡಿದರೂ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

  • ಸೀಲ್ ಕಡ್ಡಾಯ: ಬಾಟಲಿಯ ಸೀಲ್ ಯಾವುದೇ ಕಾರಣಕ್ಕೂ ಓಪನ್ ಆಗಿರಬಾರದು.

  • ಪ್ರಮಾಣದ ಮಿತಿ: ನಿರ್ದಿಷ್ಟ ಪ್ರಮಾಣದ ಮದ್ಯ ಸಾಗಿಸಲು ಮಾತ್ರ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.

  • ಮದ್ಯಪಾನ ನಿಷೇಧ: ಮೆಟ್ರೋ ರೈಲಿನ ಒಳಗೆ ಮದ್ಯಪಾನ ಮಾಡಲು ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ.

  • ಏರ್‌ಪೋರ್ಟ್ ಮಾರ್ಗಕ್ಕೆ ಆದ್ಯತೆ: ಆರಂಭದಲ್ಲಿ ಈ ಸೌಲಭ್ಯವನ್ನು ವಿಮಾನ ನಿಲ್ದಾಣದ ಮಾರ್ಗಕ್ಕೆ ಮಾತ್ರ ಸೀಮಿತಗೊಳಿಸುವ ಯೋಚನೆ ಇದೆ.

ಅನುಷ್ಠಾನ ಯಾವಾಗ?

ಇತ್ತೀಚೆಗೆ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಅಧಿಕಾರಿಗಳು ಈ ನಿಯಮಕ್ಕೆ ಒಪ್ಪಿಗೆ ನೀಡಿದರೂ, ಭದ್ರತಾ ತಪಾಸಣೆ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಜಾರಿಗೆ ತರಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.