ಚಂಡೀಗಢ: ಚಂಡೀಗಢದ 91 ವರ್ಷದ ಪ್ರಭಾವತಿ ಭಗವತಿ ಹೊಸ ಉದ್ಯಮವೊಂದನ್ನು ಆರಂಭಿಸಿರುವ ಇವರು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.
1927ರಲ್ಲಿ ಜನಿಸಿದ ಪ್ರಭಾವತಿ ಅಡುಗೆ ಮಾಡುವ ಮೂಲಕವೇ ಎಲ್ಲರಿಗೂ ಪ್ರೀತಿ ಹಂಚುತ್ತಿದ್ದರು. ಮನೆಯ ಮೌನ ಅವರ ಒಂಟಿತನವನ್ನು ಹೆಚ್ಚಿಸಿತ್ತು. ಒಮ್ಮೆ ಗೆಳೆಯರೊಂದಿಗೆ ಚಹಾ ಕೂಟದಲ್ಲಿದ್ದಾಗ ಪ್ರಭಾವತಿ ಅವರು ತಯಾರಿಸಿದ ‘ಖಾಂಡ್ರಿ’ ಎಂಬ ಗುಜರಾತಿ ತಿನಿಸನ್ನು ಎಲ್ಲರೂ ಮೆಚ್ಚಿಕೊಂಡರು. ತಮ್ಮ ಮನೆಯ ಪಾರ್ಟಿಗೂ ಅಂತಹದ್ದೇ ಖಾಂಡ್ರಿ ತಯಾರಿಸಿಕೊಡುವಂತೆ ಕೇಳಿಕೊಂಡರು. ಅಲ್ಲಿಂದ ಆರಂಭವಾದ ಇವರ ಉದ್ಯಮ ಪಯಣ ಇಂದು ‘ನಾನಿಸ್ ನಾಷ್ಟಾ’ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದೆ.
2018ರಲ್ಲಿ ಅಧಿಕೃತವಾಗಿ ಆರಂಭವಾದ ಈ ಮನೆ ಅಡುಗೆಯಲ್ಲಿ ಅಪ್ಪಟ ಗುಜರಾತಿ ಮತ್ತು ಮುಂಬೈ ಶೈಲಿಯ ತಿಂಡಿಗಳು ಲಭ್ಯವಿವೆ. ಅಜ್ಜಿಯ ಕೈರುಚಿಯಲ್ಲಿ ಮೂಡಿಬರುವ ವಡಾ ಪಾವ್, ಸೆವ್ ಪುರಿ, ಡೋಕ್ಲಾ, ಥೇಪ್ಲಾ, ಭಕ್ತಿ ಮತ್ತು ಪಾವ್ ಬಾಜಿಗಳಿಗೆ ಇಂದು ಭಾರಿ ಬೇಡಿಕೆ ಇದೆ.
ಅಹಮದಾಬಾದ್‌ನ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಈ ಅಜ್ಜಿಯ ಕೈರುಚಿಯ ಗ್ರಾಹಕರು. ಹೆಂಡತಿ, ತಾಯಿ, ಅಜ್ಜಿ ಎಂಬ ಗುರುತಿನ ಆಚೆಗೆ ಇಂದು ಪ್ರಭಾವತಿ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿ ಮಿಂಚುತ್ತಿದ್ದಾರೆ.
