S Shorts

15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಅರೆಸ್ಟ್!

15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಅರೆಸ್ಟ್!
Author: Savina Naik
Posted By: Savina Naik
Updated: Apr 18, 2026 | 5:15 PM

ಹಾಸನ: ಪೊಲೀಸರು 2011ರಲ್ಲಿ ಸಕಲೇಶಪುರ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಖೈದಿ ಚನ್ನಕೇಶವನನ್ನು 15 ವರ್ಷಗಳ ಬಳಿಕ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ಚನ್ನಕೇಶವ @ ಕೇಶವ@ ಸುರೇಶ ಬಿನ್ ಲೇಟ್ ಸಣ್ಣೇಗೌಡ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಬಂಧಿತನಾಗಿ ಸಕಲೇಶಪುರ ಜೈಲು ಸೇರಿದ್ದನು. 2011ರಲ್ಲಿ ಸಕಲೇಶಪುರ ಜೈಲಿನಲ್ಲಿದ್ದ ಈತ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು.

ಜೈಲಿನಿಂದ ತಪ್ಪಿಸಿಕೊಂಡ ನಂತರ ಚನ್ನಕೇಶವ ತನ್ನ ಗುರುತು ಸಿಗದಂತೆ ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಅಲೆದಾಡಿದ್ದನು. ಈ ವೇಳೆ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ಇತ್ತೀಚೆಗೆ ಗೋವಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.

ಆರೋಪಿ ಗೋವಾದಲ್ಲಿರುವ ಬಗ್ಗೆ ಹಾಸನ ಪೊಲೀಸರಿಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗೋವಾದಲ್ಲಿ ಈತನನ್ನು ಬಂಧಿಸಿದ್ದಾರೆ.