ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ (luxury treatment) ನೀಡುತ್ತಿರುವ ವಿಡಿಯೋ ವೈರಲ್ಆ (video viral) ಗಿ ಸರ್ಕಾರ ಮುಜುಗರಕ್ಕೊಳಗಾಗಿರುವ ಬೆನ್ನಲ್ಲೇ, ಜೈಲು ಶಂಕಿತ ಉಗ್ರರಿಗೂ ಸೇಫ್ ಜಾಗವಾಗಿ ಪರಿಣಮಿಸಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಎದುರಾಗಿದೆ. ಈ ಹಿಂದೆ ಜೈಲಿನ ಸಿಬ್ಬಂದಿಯೇ ಉಗ್ರರಿಗೆ ಮೊಬೈಲ್ ಒದಗಿಸಿರುವ ಸ್ಫೋಟಕ ಪ್ರಕರಣ ಬೆಳಕಿಗೆ ಬಂದಿತ್ತು.
ಕಳೆದ ಜುಲೈನಲ್ಲಿ ರಾಷ್ಟ್ರೀಯ ತನಿಖಾ ದಳ (NIA) ನಡೆಸಿದ ತನಿಖೆಯಲ್ಲಿ ಜೈಲಿನ ಮನೋವೈದ್ಯ ಡಾ. ನಾಗರಾಜ್,(Dr. Nagaraj) ಸಿಎಆರ್ ಎಎಸ್‌ಐ (CAR ASI) ಚಾಂದ್ ಪಾಷಾ ಹಾಗೂ ಉಗ್ರ ಜುನೈದ್ ತಾಯಿಯನ್ನು ಬಂಧಿಸಲಾಗಿತ್ತು.
ಜೈಲಿನ ಮನೋವೈದ್ಯ ನಾಗರಾಜ್ ಅವರು ಕೇವಲ ₹10 ಸಾವಿರ ಬೆಲೆಯ ಮೊಬೈಲ್‌ಗಳನ್ನು ಜೈಲಿನೊಳಗೆ ₹35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಹಲವು ವರ್ಷಗಳಲ್ಲಿ ಅವರು ಸುಮಾರು ಮುನ್ನೂರಕ್ಕೂ ಹೆಚ್ಚು ಮೊಬೈಲ್‌ಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿತ್ತು.
ನಾಗರಾಜ್ ಅವರು ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಉಗ್ರ ಟಿ. ನಾಸಿರ್ ಗೆ ಮೊಬೈಲ್ ನೀಡಿದ್ದು ಬಯಲಾಗಿತ್ತು. 2022-23 ರಲ್ಲಿ ಟ್ರೀಟ್ಮೆಂಟ್ ನೀಡುವ ನೆಪದಲ್ಲಿ ಡಾ. ನಾಗರಾಜ್ ಮೊಬೈಲ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಟಿ. ನಾಸಿರ್ (T. Nasir) ನನ್ನು ಜೈಲಿನಿಂದ ಎಸ್ಕೆಪ್ ಮಾಡಿಸಲು ಕೂಡ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಹಾಗೂ ನಾಸಿರ್ ಜೈಲಿನೊಳಗಿನಿಂದಲೇ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಜೊತೆ ನಿರಂತರ ಸಂಪರ್ಕದಲ್ಲಿರುವುದು ಎನ್‌ಐಎ ತನಿಖೆಯಲ್ಲಿ ದೃಢಪಟ್ಟಿತ್ತು.
ಇದೀಗ ನಿಷೇಧಿತ ಇಸ್ಲಾಮಿಕ್ ಸ್ಟೇಟ್ (IS) ಸಂಘಟನೆಯ ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ (Juhad Hamid Shakeel Manna) ಕೈಯಲ್ಲೂ ಮೊಬೈಲ್ ಪತ್ತೆಯಾಗಿದೆ. ಶಕೀಲ್ ಜೈಲಿನೊಳಗಿನಿಂದಲೇ ಉಗ್ರ ಸಂಘಟನೆಗೆ ಸೇರಲು ಯುವಕರಿಗೆ ಪ್ರೇರಣೆ ನೀಡುತ್ತಿದ್ದನು.
ಸದ್ಯ ಉಗ್ರರು ಮೊಬೈಲ್ ಬಳಕೆ ಮಾಡುತ್ತಿರುವುದನ್ನು ನೋಡಿದಾಗ, ಅವರು ಜೈಲಿನೊಳಗಿನಿಂದಲೇ ಸಂಘಟನೆ ಮಾಡಲು ಸಂಚು ಮಾಡುತ್ತಿರುವ ಅನುಮಾನ ಬಲವಾಗಿದೆ. ಸದ್ಯ ಶಂಕಿತ ಉಗ್ರ ಶಕೀಲ್‌ನನ್ನು ಕೂಡ ಎನ್‌ಐಎ (NIA) ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
