S Shorts

CM ಡಿಕೆಶಿ ಅವರಿಗೆ ಸ್ವಾಗತ ಎಂದ ಹೆಬ್ಬಾಳ್ಕರ್ ಸಹೋದರ; ಪೋಸ್ಟ್ ವೈರಲ್ ಆಗ್ತಿದ್ದಂತೆ ‘DCM’ ಎಂದು ಎಡಿಟ್

CM ಡಿಕೆಶಿ ಅವರಿಗೆ ಸ್ವಾಗತ ಎಂದ ಹೆಬ್ಬಾಳ್ಕರ್ ಸಹೋದರ; ಪೋಸ್ಟ್ ವೈರಲ್ ಆಗ್ತಿದ್ದಂತೆ ‘DCM’ ಎಂದು ಎಡಿಟ್
Author: Meghana Gowda
Posted By: Meghana Gowda
Updated: Dec 9, 2025 | 4:36 AM

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ (Winter Session) ಆಗಮಿಸಿದ ಉಪಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ (D.K. Shivakumar) ಅವರನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಅವರು ಮಾಡಿದ ಫೇಸ್‌ಬುಕ್ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

ವೈರಲ್ ಆದ ವಿವಾದಾತ್ಮಕ ಪೋಸ್ಟ್:

 ಡಿ.ಕೆ. ಶಿವಕುಮಾರ್ ಅವರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ (Sambra Airport) ಆಗಮಿಸಿದಾಗ, ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ನಾಯಕರು ಅವರನ್ನು ಸ್ವಾಗತಿಸಿದರು. ಹಟ್ಟಿಹೊಳಿ ಅವರು ಸ್ವಾಗತದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, “ಮುಖ್ಯಮಂತ್ರಿಗಳಿಗೆ (Chief Minister) ಸ್ವಾಗತ” ಎಂದು ಬರೆದಿದ್ದರು.

ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ (Viral) ಆಗುತ್ತಿದ್ದಂತೆ, ಸಿಎಂ ಹುದ್ದೆಯ ವಿಚಾರದಲ್ಲಿ ನಡೆಯುತ್ತಿರುವ ಪೈಪೋಟಿಯ ಹಿನ್ನೆಲೆಯಲ್ಲಿ ಇದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ತಕ್ಷಣವೇ ಅದನ್ನು ಡಿಲೀಟ್ ಮಾಡಿ, “ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಸ್ವಾಗತ” ಎಂದು ಎಡಿಟ್ ಮಾಡಿ ರೀ-ಪೋಸ್ಟ್ ಮಾಡಲಾಯಿತು.

ಸ್ವಾಗತಿಸುವ  ವೇಳೆ ಶಾಸಕರಾದ ಆಸಿಫ್ ಸೇಠ್, ಮಾಜಿ ಶಾಸಕರಾದ ಶ್ಯಾಮ್ ಘಾಟಗೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಘಟನೆ ಕಾಂಗ್ರೆಸ್ (Congress) ಪಕ್ಷದೊಳಗಿನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಗಳ ಸುತ್ತ ಇರುವ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.