ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಆರ್ಥಿಕ ತಜ್ಞರಾದ ಟಿ.ವಿ. ಮೊಹನ್ ದಾಸ್ ಪೈ (T.V. Mohandas Pai) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿನ ‘ಕಳಪೆ ಆಡಳಿತ’ (Bad governance) ಮತ್ತು ಆರ್ಥಿಕ ನೀತಿಗಳ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆ (Twitter/X Account) ಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಬೆಳವಣಿಗೆಯು ಬೃಹತ್ ಉಚಿತ ಯೋಜನೆಗಳು, ಹೆಚ್ಚಿನ ಭ್ರಷ್ಟಾಚಾರ, ಬಂಡವಾಳ ವೆಚ್ಚದ ಕೊರತೆ , ದೊಡ್ಡ ಸಾಲಗಳು (bigger debts) ಮತ್ತು ಬೃಹತ್ ಆದಾಯ ಕೊರತೆಗಳಿಂದ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.
ಉಚಿತ ಯೋಜನೆಗಳಿಗಾಗಿ ಸಾಲ ಪಡೆಯುವುದು , ಸಾಕಷ್ಟು ಉತ್ತಮ ಉದ್ಯೋಗಗಳ ಕೊರತೆ (lack of adequate good jobs) ಮತ್ತು ಬೆಂಗಳೂರನ್ನು ಕಡೆಗಣಿಸುವುದು (ignoring Bengaluru) ಸಹ ರಾಜ್ಯದ ಆರ್ಥಿಕತೆಗೆ ಹೊಡೆತ ನೀಡಿದೆ. ಹಾಗೂ ಕರ್ನಾಟಕವು ಕಳಪೆ ಆಡಳಿತದಿಂದ (suffering bad governance) ಬಳಲುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ.
ದಯವಿಟ್ಟು ಬದಲಾಯಿಸಿ. ನಮ್ಮ ಭವಿಷ್ಯವನ್ನು ಅಪಾಯಕ್ಕೆ ದೂಡಬೇಡಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
