S Shorts

Kiccha Fan | ಗಡಿಭಾಗದಲ್ಲಿ ಕಿಚ್ಚನ ಜಪ: ಸುದೀಪ್‌ಗಾಗಿ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡುತ್ತಿರುವ ತಮಿಳುನಾಡು ಕನ್ನಡಿಗ!

Kiccha Fan | ಗಡಿಭಾಗದಲ್ಲಿ ಕಿಚ್ಚನ ಜಪ: ಸುದೀಪ್‌ಗಾಗಿ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡುತ್ತಿರುವ ತಮಿಳುನಾಡು ಕನ್ನಡಿಗ!
Author: Meghana Gowda
Posted By: Meghana Gowda
Updated: Mar 23, 2026 | 3:39 PM

ಚಾಮರಾಜನಗರ: ಅಭಿಮಾನಕ್ಕೆ ಯಾವುದೇ ಗಡಿಗಳಿಲ್ಲ ಎಂಬುದು ಚಾಮರಾಜನಗರ ಗಡಿಯಂಚಿನ ತಮಿಳುನಾಡಿನ ತಾಳವಾಡಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ (Kiccha Sudeep) ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ವ್ಯಕ್ತಿಯೊಬ್ಬರು ತಾವೇ ಗುಡಿ ನಿರ್ಮಿಸಿ, ನಿತ್ಯ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಮಿಳುನಾಡು (Tamil Nadu) ರಾಜ್ಯದ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರು ಗ್ರಾಮದ ನಿವಾಸಿ ಸಿದ್ದರಾಜು (Siddaraju) ಎಂಬುವವರೇ ಈ ವಿಶೇಷ ಅಭಿಮಾನಿ. ಜೀವನೋಪಾಯಕ್ಕಾಗಿ ಐಸ್ ಕ್ಯಾಂಡಿ ಮಾರುವ ಸಿದ್ದರಾಜು ಅವರಿಗೆ ಸುದೀಪ್ ಎಂದರೆ ಪಂಚಪ್ರಾಣ. ಸಿದ್ದರಾಜು ಅವರು ಕೇವಲ ಸುದೀಪ್ ಮಾತ್ರವಲ್ಲದೆ, ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕ ಅವರಿಗೂ ಗುಡಿ ನಿರ್ಮಿಸಿದ್ದಾರೆ. ಅದರಲ್ಲಿ ಸುದೀಪ್ ಅವರ ಭಾವಚಿತ್ರಕ್ಕೆ ನಿತ್ಯ ಆರಾಧನೆ ಮಾಡುತ್ತಾರೆ.

ಪ್ರತಿದಿನವೂ ಪೂಜೆ ಸಲ್ಲಿಸುವ ಸಿದ್ದರಾಜು, ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ನೆಚ್ಚಿನ ನಟನಿಗಾಗಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಸುದೀಪ್ ಅವರ ಯಾವುದೇ ಸಿನಿಮಾ ಬಿಡುಗಡೆಯಾದರೂ ಸಿದ್ದರಾಜು ತಪ್ಪದೇ ‘ಫಸ್ಟ್ ಡೇ ಫಸ್ಟ್ ಶೋ’ ನೋಡುತ್ತಾರೆ. ವಿಶೇಷವೆಂದರೆ, ಇವರ ಈ ಕ್ರೇಜಿಗೆ ಮನೆಯವರೂ ಕೂಡ ಪೂರ್ಣ ಬೆಂಬಲ ನೀಡಿದ್ದಾರೆ. ಡಾ. ರಾಜ್‌ಕುಮಾರ್ ಅವರ ಜನ್ಮಸ್ಥಳವಾದ ದೊಡ್ಡ ಗಾಜನೂರಿನಲ್ಲೇ ಸಿದ್ದರಾಜು ಈ ಮಟ್ಟದ ಕನ್ನಡಾಭಿಮಾನ ಮೆರೆಯುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.