S Shorts

ರೆಸಾರ್ಟ್‌ನಲ್ಲಿ ಬೆಂಗಳೂರು ರೌಡಿಶೀಟರ್‌ನ Birthday ಪಾರ್ಟಿ; Drugs ಸೇವಿಸಿದ್ದ 17 ಮಂದಿ ಅರೆಸ್ಟ್!

ರೆಸಾರ್ಟ್‌ನಲ್ಲಿ ಬೆಂಗಳೂರು ರೌಡಿಶೀಟರ್‌ನ Birthday ಪಾರ್ಟಿ; Drugs ಸೇವಿಸಿದ್ದ 17 ಮಂದಿ ಅರೆಸ್ಟ್!
Author: Sagaradventure
Posted By: Sagaradventure
Updated: Apr 5, 2026 | 10:35 AM

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪದ ರೆಸಾರ್ಟ್‌ವೊಂದರಲ್ಲಿ ನಡೆಯುತ್ತಿದ್ದ ಬೆಂಗಳೂರಿನ ಹಳೇ ರೌಡಿಶೀಟರ್‌ನ ಹುಟ್ಟುಹಬ್ಬದ ಪಾರ್ಟಿ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಪಾರ್ಟಿಯಲ್ಲಿ ಮಾದಕ ದ್ರವ್ಯ (ಡ್ರಗ್ಸ್) ಸೇವನೆ ಮಾಡಿದ್ದ ಆರೋಪದ ಮೇಲೆ ರೌಡಿಶೀಟರ್ ಸೇರಿದಂತೆ ಒಟ್ಟು 17 ಜನರನ್ನು ಪೊಲೀಸರು ಬಂಧಿಸಿದ್ದಾರೆ.

​ಬೆಂಗಳೂರಿನ ಜೆ.ಜೆ. ನಗರದ ಹಳೇ ರೌಡಿಶೀಟರ್ ಜಾಹೀರ್ ಖಾಲು (43) ಎಂಬಾತನ ಹುಟ್ಟುಹಬ್ಬದ ಪ್ರಯುಕ್ತ ಮಧುವನಹಳ್ಳಿ ಬಳಿಯ ನಗರವಾಸಿ ಫಯಾಜ್‌ಖಾನ್ (64) ಎಂಬುವರಿಗೆ ಸೇರಿದ ರೆಸಾರ್ಟ್‌ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಆತನ ಬೆಂಬಲಿಗರು ಹಾಗೂ ಹಿತೈಷಿಗಳು ಸೇರಿದಂತೆ ಸುಮಾರು 50ರಿಂದ 60 ಜನರು ಭಾಗವಹಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಶಿವಮಾದಯ್ಯ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುಪ್ರಿತ್ ನೇತೃತ್ವದ ಪೊಲೀಸ್ ತಂಡ ಶನಿವಾರ ಏಕಾಏಕಿ ದಾಳಿ ನಡೆಸಿದೆ. ಪಾರ್ಟಿಯಲ್ಲಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 17 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.

​ದಾಳಿಯ ವೇಳೆ ಆರೋಪಿಗಳ ಕಾರು ಮತ್ತು ಬೈಕ್‌ನಲ್ಲಿ ಬಚ್ಚಿಡಲಾಗಿದ್ದ ಸುಮಾರು 45 ಸಾವಿರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿದ್ದ 1 ಕಾರು, 1 ಬೈಕ್ ಸೇರಿದಂತೆ ಒಟ್ಟು 10.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

​ಬಂಧಿತರ ವಿವರ: ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದ ರೌಡಿಶೀಟರ್ ಜಾಹೀರ್ ಖಾಲು, ರೆಸಾರ್ಟ್ ಮಾಲೀಕ ಫಯಾಜ್ ಖಾನ್ (67) ಸೇರಿದಂತೆ ಚನ್ನಪಟ್ಟಣದ ವಿಷಾರ್ ಖಾನ್ (38), ಬೆಂಗಳೂರಿನ ಜಿ.ಟಿ.ಆರ್ ನಗರದ ಸೈಯದ್ ಯೂನಸ್, ಚಾಮರಾಜಪೇಟೆಯ ಸದ್ರುಲ್ಲಾ ಬೇಗ್ (28), ಬೊಮ್ಮನಹಳ್ಳಿಯ ಲಿಯಾಸ್ ಖಾನ್ (42), ಬಿ.ಎಸ್.ಟಿ ಬಡಾವಣೆಯ ಶಭಾಷ್ (28), ಜೀವನಪುರ ಬಡಾವಣೆಯ ಶರ್ಪುದ್ದೀನ್ (45), ಸುದ್ದುಗುಂಟೆಪಾಳ್ಯದ ಪವನ್ (22), ಬನಶಂಕರಿಯ ಸಾದಿಕ್ ಪಾಷಾ (28), ಗುರುಪ್ಪನಪಾಳ್ಯದ ಅಪ್ಪ ಬೇಗ್ (45), ಮಡಿವಾಳದ ಮಹಮದ್ ಶಕೀಲ್ (28), ಕೊಳ್ಳೇಗಾಲದ ಮಧುವನಹಳ್ಳಿಯ ಕುಮಾರಸ್ವಾಮಿ (30), ರಾಜೀವ್ ನಗರದ ನವೀನ್ ರಾಜ್ (33) ಹಾಗೂ ಬೆಂಗಳೂರಿನ ಶಮೀರ್ ಬಂಧಿತ ಆರೋಪಿಗಳಾಗಿದ್ದಾರೆ.