S Shorts

Slipper ಜಾಹೀರಾತಿನಿಂದ KSRTCಗೆ ಮುಖಭಂಗ

Slipper ಜಾಹೀರಾತಿನಿಂದ KSRTCಗೆ ಮುಖಭಂಗ
Author: Meghana Gowda
Posted By: Meghana Gowda
Updated: Nov 4, 2025 | 4:46 AM

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮ (KSRTC) ಬಸ್‌ಗಳ ಮೇಲೆ ಹಾಕಿದ್ದ ಚಪ್ಪಲಿ ಜಾಹೀರಾತು ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. ಬಸ್‌ಗಳಲ್ಲಿರುವ ಜಾಹೀರಾತು ಕಂಡು ಸಾರ್ವಜನಿಕರು ನೇರವಾಗಿ KSRTC ಸಹಾಯವಾಣಿ (helpline)ಗೆ ಕರೆ ಮಾಡಿ “ಚಪ್ಪಲಿ ಕೊಡಿ!” ಎಂದು ಕೇಳುತ್ತಿರುವ ಘಟನೆ ವರದಿಯಾಗಿದೆ.

ಚಪ್ಪಲಿ ಬ್ರಾಂಡ್‌ನ ಜಾಹೀರಾತುಗಳು KSRTC ಬಸ್‌ಗಳ ಮೇಲೆ ಕಾಣಿಸಿಕೊಂಡ ನಂತರ, ಸಾರ್ವಜನಿಕರು ಹಾಸ್ಯಾತ್ಮಕವಾಗಿ ಸಹಾಯವಾಣಿಗೆ ಕರೆ ಮಾಡಿ “ನಮಗೂ ಚಪ್ಪಲಿ ಬೇಕು” ಎಂದು ಹೇಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಕೆಲವರು “ನಮ್ಮ ದುಡ್ಡಿನಲ್ಲಿ ಓಡೋ ಬಸ್‌ಗಳನ್ನ ಜಾಹೀರಾತುಗಳಿಂದ ಹಾಳು ಮಾಡ್ತೀರಾ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಹೀರಾತು ಎಫೆಕ್ಟ್ KSRTC ಅಧಿಕಾರಿಗಳಿಗೂ ಅಚ್ಚರಿ ತಂದಿದ್ದು, ಈಗ ನಿಗಮವು ಈ ರೀತಿಯ ವ್ಯಂಗ್ಯ ಕರೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಸಿಬ್ಬಂದಿಗೆ ಸೂಚನೆ ನೀಡಿದೆ.

ಸಾಮಾನ್ಯರು ಬಸ್‌ಗಳ ಮೇಲೆ ಇರುವ ಜಾಹೀರಾತನ್ನು ನೋಡಿ ಮಾರ್ಮಿಕವಾಗಿ ಮಾತನಾಡುತ್ತಿರುವ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ  ವೈರಲ್ ಆಗಿದೆ.