ಬೆಂಗಳೂರು: ನಗರದಲ್ಲಿ ತಡರಾತ್ರಿ ಪಾರ್ಟಿ (Late Night Party) ನಡೆಸಿದ ಆರೋಪದ ಮೇಲೆ ಎರಡು ಪ್ರಮುಖ ಪಬ್‌ಗಳ (Pubs) ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು (FIR) ದಾಖಲಾಗಿವೆ. ಈ ಎರಡೂ ಪ್ರಕರಣಗಳು ಇತ್ತೀಚೆಗೆ ಈ ಪಬ್‌ಗಳಲ್ಲಿ ನಡೆದ ಗಲಾಟೆ ಮತ್ತು ದುರ್ವರ್ತನೆ ಘಟನೆಗಳಿಗೆ ಸಂಬಂಧಿಸಿವೆ.
ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್‌ನಲ್ಲಿ (Bastion Pub) ಡಿಸೆಂಬರ್ 11ರ ತಡರಾತ್ರಿ ಉದ್ಯಮಿಯೊಬ್ಬರು ಗಲಾಟೆ ಮಾಡಿದ ಪ್ರಕರಣ. ಹಾಗೂ ಪಬ್ ಅನ್ನು ತಡರಾತ್ರಿ 1.30 ರವರೆಗೆ ತೆರೆದಿದ್ದು, ಹಾಗೂ ನಿಯಮಗಳನ್ನು ಉಲ್ಲಂಘಿಸಿ ನೈಟ್ ಪಾರ್ಟಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಪೊಲೀಸರು ಎಫ್. ಐ. ಆರ್ ದಾಖಲಿಸಿದ್ದಾರೆ.
ಹಾಗೂ ನವೆಂಬರ್ 30ರ ತಡರಾತ್ರಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಅಸಭ್ಯವಾಗಿ ವರ್ತಿಸಿದ ಆರೋಪ ಸೋರ್ ಬೆರ್ರಿ ಪಬ್ (Sore Berry Pub) ಪಬ್‌ನ ಮೇಲೆ ಕೂಡ ದೂರು ದಾಖಲಾಗಿದೆ. ಈ ಪಬ್‌ನಲ್ಲಿ ಕೂಡ ತಡರಾತ್ರಿ 1.25 ರವರೆಗೂ ಪಾರ್ಟ್ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸಿ.ಸಿ.ಟಿ.ವಿ. ದೃಶ್ಯಗಳಿಂದ ದೃಢಪಟ್ಟಿದೆ.
ಈ ಎರಡೂ ಪಬ್ ಗಳಲ್ಲಿ ನಡೆದಿರುವ ಪ್ರತ್ಯೇಕ ಘಟನೆಗಳ ಕುರಿತಂತೆ ಪೊಲೀಸರು ಸಿ.ಸಿ.ಟಿ.ವಿ. ಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಿಗದಿತ ಸಮಯ ಮೀರಿ ಪಾರ್ಟಿಗಳು ನಡೆದಿದ್ದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಎರಡೂ ಪಬ್‌ಗಳ ವಿರುದ್ಧ ಕರ್ನಾಟಕ ಪೊಲೀಸ್ ಆ್ಯಕ್ಟ್ ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
