S Shorts

‘ಪಡುಗಡಲೊಡೆಯ’ ಕಾದಂಬರಿಯ ಟ್ರೈಲರ್‌ಗೆ ಕಿಚ್ಚ ಸುದೀಪ್, ಡಾಲಿ ಧನಂಜಯ ಧ್ವನಿ: ನ.15ರಂದು ರಿಲೀಸ್

‘ಪಡುಗಡಲೊಡೆಯ’ ಕಾದಂಬರಿಯ ಟ್ರೈಲರ್‌ಗೆ ಕಿಚ್ಚ ಸುದೀಪ್, ಡಾಲಿ ಧನಂಜಯ ಧ್ವನಿ: ನ.15ರಂದು ರಿಲೀಸ್
Author: Sagaradventure
Posted By: Sagaradventure
Updated: Nov 3, 2026 | 9:54 AM

ಬೆಂಗಳೂರು: ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರು ರಚಿಸಿರುವ ‘Lord of the Western Sea’ (ಪಡುಗಡಲೊಡೆಯ) ಐತಿಹಾಸಿಕ ಕಾದಂಬರಿಯ ಇಂಗ್ಲಿಷ್ ಮತ್ತು ಕನ್ನಡ ಟ್ರೈಲರ್‌ಗಳು ನವೆಂಬರ್ 15ರಂದು ಬಿಡುಗಡೆಯಾಗಲಿವೆ. ಈ ಐತಿಹಾಸಿಕ ಕಾದಂಬರಿಯ ಇಂಗ್ಲಿಷ್ ಟ್ರೈಲರ್‌ಗೆ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಧ್ವನಿ ನೀಡಿದ್ದರೆ, ಕನ್ನಡ ಟ್ರೈಲರ್‌ಗೆ ನಟರಾಕ್ಷಸ ಡಾಲಿ ಧನಂಜಯ ನಿರೂಪಣೆ ಮಾಡಿರುವುದು ಸಾಹಿತ್ಯ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕೆಳದಿಯ ಶಿವಪ್ಪ ನಾಯಕ ಹಾಗೂ ಪೋರ್ಚುಗೀಸರ ನಡುವೆ ನಡೆದ ಐತಿಹಾಸಿಕ ನೌಕಾಯುದ್ಧದ ರೋಚಕ ಕಥಾಹಂದರವನ್ನು ಈ ಕೃತಿ ಒಳಗೊಂಡಿದೆ. ಕಾದಂಬರಿಯ ಕಥೆಯನ್ನು ಮೆಚ್ಚಿಕೊಂಡ ಕಿಚ್ಚ ಸುದೀಪ್ ಅವರು ತಮ್ಮ ಖಾಸಗಿ ಸ್ಟುಡಿಯೋದಲ್ಲೇ ಇಂಗ್ಲಿಷ್ ನಿರೂಪಣೆಯ ಧ್ವನಿಮುದ್ರಣ ಮಾಡಿಕೊಟ್ಟಿದ್ದಾರೆ. ಅದೇ ರೀತಿ, ಕನ್ನಡ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಹಾಗೂ ಅಭಿಮಾನ ಹೊಂದಿರುವ ನಟ ಡಾಲಿ ಧನಂಜಯ ಅವರು ಕೂಡ ಈ ಪ್ರಾಜೆಕ್ಟ್‌ಗೆ ತಕ್ಷಣವೇ ಒಪ್ಪಿಗೆ ಸೂಚಿಸಿ ಕನ್ನಡದ ನಿರೂಪಣೆಯನ್ನು ಒದಗಿಸಿದ್ದಾರೆ.

ಕನ್ನಡ ನಾಡಿನ ವೀರ ಇತಿಹಾಸವನ್ನು ಸಾರುವ ಈ ಐತಿಹಾಸಿಕ ಕಾದಂಬರಿಯು ಇದೇ ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದ್ದು, ಪುಸ್ತಕ ಬಿಡುಗಡೆಯ ನಿಖರ ದಿನಾಂಕವನ್ನು ಲೇಖಕರು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.