S Shorts

Traffic Jam ಕ್ಲಿಯರ್ ಮಾಡಲು ಪಿಸ್ತೂಲ್ ಝಳಪಿಸಿದ ಭೂಪ: ಅಸಲಿಯತ್ತು ಬಿಚ್ಚಿಟ್ಟ ಪೊಲೀಸರು!

Traffic Jam ಕ್ಲಿಯರ್ ಮಾಡಲು ಪಿಸ್ತೂಲ್ ಝಳಪಿಸಿದ ಭೂಪ: ಅಸಲಿಯತ್ತು ಬಿಚ್ಚಿಟ್ಟ ಪೊಲೀಸರು!
Author: Sagaradventure
Posted By: Sagaradventure
Updated: Apr 5, 2026 | 3:06 PM

ಉತ್ತರ ಪ್ರದೇಶದ ಲಕ್ನೋದಲ್ಲಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ರಸ್ತೆಗಿಳಿದ ವಿಚಿತ್ರ ಘಟನೆ ನಡೆದಿದೆ. ಸಹದತ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಬ್ ಗಂಜ್ ರಸ್ತೆಯಲ್ಲಿ ಈ ಹೈಡ್ರಾಮಾ ನಡೆದಿದ್ದು, ಗಂಟೆಗಟ್ಟಲೆ ನಿರ್ಮಾಣವಾಗಿದ್ದ ಸಂಚಾರ ದಟ್ಟಣೆ ಈತನ ಕೃತ್ಯದಿಂದ ಕೇವಲ ಕೆಲವೇ ನಿಮಿಷಗಳಲ್ಲೇ ಕ್ಲಿಯರ್ ಆಗಿದೆ. ಸದ್ಯ ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ತನ್ನ ವಾಹನವನ್ನು ಮುಂದೆ ಸಾಗಿಸಲು ಹಾಗೂ ಟ್ರಾಫಿಕ್ ತೆರವುಗೊಳಿಸಲು ರಸ್ತೆಯ ಮಧ್ಯೆ ಪಿಸ್ತೂಲ್ ಝಳಪಿಸುತ್ತಾ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ ದೃಶ್ಯವು ಸ್ಥಳದಲ್ಲಿದ್ದ ವಾಹನ ಸವಾರರು ಮತ್ತು ಪ್ರಯಾಣಿಕರಲ್ಲಿ ತೀವ್ರ ಭೀತಿ ಹುಟ್ಟಿಸಿತ್ತು. ವೈರಲ್ ಆಗಿರುವ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಲಕ್ನೋ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಆರೋಪಿಯನ್ನು ಗುರುತಿಸುವ ಕಾರ್ಯಾಚರಣೆ ಕೈಗೊಂಡರು.

ತನಿಖೆಯ ಬಳಿಕ ಅಸಲಿಯತ್ತು ಬಯಲಾಗಿದ್ದು, ರಸ್ತೆಯಲ್ಲಿ ಆತ ಹಿಡಿದಿದ್ದ ವಸ್ತುವು ವಾಸ್ತವವಾಗಿ ನಿಜವಾದ ಬಂದೂಕು ಆಗಿರದೆ, ಕೇವಲ ಬಂದೂಕನ್ನು ಹೋಲುವ ಸಿಗರೇಟ್ ಲೈಟರ್ ಆಗಿತ್ತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹೋಗಿ ಈತ ಮಾಡಿರುವ ಕೃತ್ಯ ಸದ್ಯ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.