ಬೆಂಗಳೂರು: ಎಷ್ಟೋ ಜನರಿಗೆ ಮಹಾತ್ಮ ಗಾಂಧೀಜಿಯವರು (Mahatma Gandhiji) ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಪಡೆದಿದ್ದರು ಎನ್ನುವ ಕುತೂಹಲವಿರುವುದು ಸಹಜ. ಗಾಂಧೀಜಿಯವರ ಹತ್ತನೇ ತರಗತಿಯ ಅಂಕ ಪಟ್ಟಿ ವೈರಲ್ ಆಗುತ್ತಿದೆ.
1887 ರಲ್ಲಿ ರಾಜ್ ಕೋಟಟ್‌ನ ಆಲ್ಫ್ರೆಡ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ವೇಳೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೀವಿಲ್ಲಿ ಗಮನಿಸಬಹುದು. ಈ ಅಂಕಪಟ್ಟಿಯ ಪ್ರಕಾರ, ಮಹಾತ್ಮ ಗಾಂಧಿ ಅವರು ಇಂಗ್ಲಿಷ್ ವಿಷಯದಲ್ಲಿ 89 ಅಂಕಗಳನ್ನು ಗಳಿಸಿದರೆ, ದ್ವಿತೀಯ ಭಾಷಾ ವಿಷಯದಲ್ಲಿ 45 ಅಂಕಗಳು ಮತ್ತು ಗಣಿತದಲ್ಲಿ 59 ಅಂಕಗಳು, ವಿಜ್ಞಾನದಲ್ಲಿ 34 ಹಾಗೂ ಇತಿಹಾಸದಲ್ಲಿ 20 ಅಂಕಗಳನ್ನು ಪಡೆದಿರುವುದನ್ನು ನೀವಿಲ್ಲಿ ನೋಡಬಹುದು. ಅಂದರೆ 625 ರಲ್ಲಿ ಕೇವಲ 247.5 ಅಂಕಗಳನ್ನು ಪಡೆದುಕೊಂಡಿರುವುದನ್ನು ಕಾಣಬಹುದು.
ವಿದ್ಯಾರ್ಥಿಯಾಗಿದ್ದ ಅವರು ಶಾಲಾ ಅಂತಿಮ ಪರೀಕ್ಷೆಯಲ್ಲಿ 800 ವಿದ್ಯಾರ್ಥಿಗಳಲ್ಲಿ 404ನೇ ರ್ಯಾಂಕ್ ಪಡೆದಿದ್ದರು ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.
ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜ್ಞಾನ ಕಡಿಮೆ .ಆ ಸಮಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಶಿಕ್ಷಣ ಪಡೆದಿದ್ದರು ಮತ್ತು ಶಾಲೆಗಳ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ.
