S Shorts

Light off ಮಾಡುವ ವಿಚಾರಕ್ಕೆ ಜಗಳ: ಸಹೋದ್ಯೋಗಿ ಮೇಲೆ ಡಂಬಲ್ಸ್‌ನಿಂದ ದಾಳಿ!

Light off ಮಾಡುವ ವಿಚಾರಕ್ಕೆ ಜಗಳ: ಸಹೋದ್ಯೋಗಿ ಮೇಲೆ ಡಂಬಲ್ಸ್‌ನಿಂದ ದಾಳಿ!
Author: StateNews Desk
Posted By: StateNews Desk
Updated: Nov 1, 2025 | 1:00 PM

ಬೆಂಗಳೂರು: ಬಾಡಿಗೆ ಕಚೇರಿಯೊಂದರಲ್ಲಿ ಲೈಟ್‌ ಆಫ್‌ ಮಾಡುವ ವಿಚಾರದಲ್ಲಿ ನಡೆದ ಜಗಳದಲ್ಲಿ, 41 ವರ್ಷದ ಸಹೋದ್ಯೋಗಿಯೊಬ್ಬರನ್ನು 24 ವರ್ಷದ ಯುವಕ ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಮೂಲದವರಾದ ಭೀಮೇಶ್ ಬಾಬು (41) ಕೊಲೆಯಾದ ವ್ಯಕ್ತಿ. ವಿಜಯವಾಡ ಮೂಲದ ಸೋಮಲ ವಂಶಿ (24) ಆರೋಪಿ. ಇಬ್ಬರೂ ‘ಡಾಟಾ ಡಿಜಿಟಲ್ ಬ್ಯಾಂಕ್’ ಎಂಬ ಕಂಪನಿಯ ಕಚೇರಿಯಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳಾಗಿದ್ದರು.

ಶನಿವಾರ ಮುಂಜಾನೆ 1:30 ರ ಸುಮಾರಿಗೆ ಲೈಟ್ ಆಫ್ ಮಾಡುವ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಸಿಟ್ಟಿಗೆದ್ದ ಸೋಮಲ ವಂಶಿ, ತನ್ನ ಸಹೋದ್ಯೋಗಿ ಭೀಮೇಶ್ ಬಾಬು ಅವರ ಹಣೆಯ ಮೇಲೆ ಡಂಬಲ್ಸ್‌‌ನಿಂದ (Dumbbell) ಹೊಡೆದಿದ್ದಾನೆ. ಇದರ ಪರಿಣಾಮವಾಗಿ ಭೀಮೇಶ್ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಆರೋಪಿ ಸೋಮಲ ವಂಶಿ ನೇರವಾಗಿ ಗೋವಿಂದರಾಜ ನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ವಂಶಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.