S Shorts

ಎಮರ್ಜಿಂಗ್ ಮಾರ್ಕೆಟ್ಸ್ ಕ್ಷೇತ್ರದ ದಂತಕಥೆ ಮಾರ್ಕ್ ಮೋಬಿಯಸ್ ನಿಧನ

ಎಮರ್ಜಿಂಗ್ ಮಾರ್ಕೆಟ್ಸ್ ಕ್ಷೇತ್ರದ ದಂತಕಥೆ ಮಾರ್ಕ್ ಮೋಬಿಯಸ್ ನಿಧನ
Author: Savina Naik
Posted By: Savina Naik
Updated: Apr 16, 2026 | 3:38 PM

ನವದೆಹಲಿ: ಹೂಡಿಕೆದಾರ ಮತ್ತು ‘ಎಮರ್ಜಿಂಗ್ ಮಾರ್ಕೆಟ್ಸ್’ (ಉದಯೋನ್ಮುಖ ಮಾರುಕಟ್ಟೆ) ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ಮಾರ್ಕ್ ಮೋಬಿಯಸ್ (89) ಅವರು ಏಪ್ರಿಲ್ 15, ಬುಧವಾರದಂದು ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.

ಭಾರತದ ಆರ್ಥಿಕ ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಇರಿಸಿದ್ದ ಮೋಬಿಯಸ್, ‘ಇಂಡಿಯಾನಾ ಜೋನ್ಸ್’ ಎಂದೇ ಪ್ರಸಿದ್ಧರು. 100ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಹೊಸ ಹೂಡಿಕೆ ಕ್ಷೇತ್ರಗಳನ್ನು ಗುರುತಿಸಿದ್ದರು. ಅವರ ಧೈರ್ಯಶಾಲಿ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿವೆ.

ಮಾರ್ಕ್ ಮೋಬಿಯಸ್ ಅವರು ಅಮೆರಿಕದ ಪ್ರತಿಷ್ಠಿತ MIT ಸಂಸ್ಥೆಯಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಸುಮಾರು ಮೂರು ದಶಕಗಳ ಕಾಲ ‘ಟೆಂಪಲ್ಟನ್ ಎಮರ್ಜಿಂಗ್ ಮಾರ್ಕೆಟ್ಸ್ ಗ್ರೂಪ್’ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೂಡಿಕೆಗೆ ಸಂಬಂಧಿಸಿದಂತೆ ‘ದ ಇನ್ವೆಸ್ಟರ್ಸ್ ಗೈಡ್ ಟು ಎಮರ್ಜಿಂಗ್ ಮಾರ್ಕೆಟ್ಸ್’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ.

ಅವರ ನಿಧನದ ನಂತರ, ಜಾನ್ ನಿನಿಯಾ ಮತ್ತು ಎರಿಕ್ ಎನ್ಗುಯೆನ್ ಅವರು ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.