S Shorts

ಒಬ್ಬಳೇ ಪತ್ನಿ, ಇಬ್ಬರು ಪತಿ: ಇಬ್ಬರು ಸಹೋದರರನ್ನು ಮದುವೆಯಾಗಿದ್ದ ಮಹಿಳೆ ಈಗ ತಾಯಿ..

ಒಬ್ಬಳೇ ಪತ್ನಿ, ಇಬ್ಬರು ಪತಿ: ಇಬ್ಬರು ಸಹೋದರರನ್ನು ಮದುವೆಯಾಗಿದ್ದ ಮಹಿಳೆ ಈಗ ತಾಯಿ..
Author: Savina Naik
Posted By: Savina Naik
Updated: Apr 18, 2026 | 2:31 PM

ಹಿಮಾಚಲ ಪ್ರದೇಶ:  ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್, ‘ಜೋಡಿದಾರ್’ ಪದ್ಧತಿಯಂತೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಇದೀಗ ಅವರು ಮಗುವಿಗೆ ಜನ್ಮ ನೀಡಿದ್ದು,   ಮಗುವಿಗೆ ಇಬ್ಬರೂ ಅಪ್ಪಂದಿರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಿಮಾಚಲ ಪ್ರದೇಶದ ಕೆಲವು ಸಮುದಾಯದಲ್ಲಿ ಇರುವ ಜೋಡಿದಾರ್​ ಪದ್ಧತಿ ಅನ್ವಯ ಈ ಮದುವೆ ನಡೆದಿತ್ತು. ಸಿರ್ಮೌರ್ ಜಿಲ್ಲೆಯ ಕುಟುಂಬಸ್ಥರು ಅಲ್ಲಿಯ ಸಂಪ್ರದಾಯದಂತೆ ಸಹೋದರರನ್ನು ಒಬ್ಬಳಿಗೇ ಮದುವೆ ಮಾಡಿಸಿದ್ದರು. “ಜೋಡಿದಾರ್” ಅಥವಾ ಬಹುಪತ್ನಿತ್ವ ಸಂಪ್ರದಾಯವು ಒಂದೇ ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸಹೋದರರು ಒಬ್ಬ ಮಹಿಳೆಯನ್ನು ಮದುವೆಯಾಗಲು ಅನುವು ಮಾಡಿಕೊಡುತ್ತದೆ.

ಮಗು ಹುಟ್ಟಿದ್ದರೂ ಅದರ ರಿಯಲ್​ ಅಪ್ಪ ಯಾರು ಎಂದು ಡಿಎನ್​ಎ ಪರೀಕ್ಷೆ ಮಾಡುವ ಸಂಪ್ರದಾಯ ಅಲ್ಲಿಲ್ಲ. ಆದ್ದರಿಂದ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಈ ಮಗುವಿಗೆ ಈಗ ಇಬ್ಬರು ಅಪ್ಪಂದಿರು, ಒಬ್ಬನ ಹೆಸರು ಪ್ರದೀಪ್ ನೇಗಿ ಮತ್ತು ಇನ್ನೊಬ್ಬನ ಹೆಸರು ಕಪಿಲ್ ನೇಗಿ. ಅಷ್ಟಕ್ಕೂ ಹೀಗೆ ಸಹೋದರರನ್ನು ಮದುವೆಯಾಗಿರುವವಳು ಇವಳೊಬ್ಬಳೇ ಏನಲ್ಲ.

ಒಬ್ಬ ತಂದೆ ಮನೆಯಲ್ಲಿಯೇ ಇದ್ದು, ಇನ್ನೊಬ್ಬ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಂದಲೇ ಸೋಷಿಯಲ್​ ಮೀಡಿಯಾದಲ್ಲಿ ಆತ ಶುಭ ಕೋರಿದ್ದಾನೆ.