S Shorts

ಭೀಕರ ದುರಂತ: ತಾಯಿ ಮಗು Death

ಭೀಕರ ದುರಂತ:  ತಾಯಿ ಮಗು Death
Author: Meghana Gowda
Posted By: Meghana Gowda
Updated: Nov 2, 2025 | 6:30 AM

ಕೋಲಾರ: ತಾಲ್ಲೂಕಿನ ಹೊಗರಿಗೊಲ್ಲಹಳ್ಳಿಯಲ್ಲಿ ಭೀಕರ ದುರಂತ ಸಂಬವಿಸಿದ್ದ,ತಾಯಿ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 30 ವರ್ಷದ ಮಾಲಾ ಮತ್ತು ಆರು ವರ್ಷದ ಚಕ್ರವರ್ತಿ ಎಂಬ ತಾಯಿ-ಮಗು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕಂಡುಬಂದಿದೆ.

ಸ್ಥಳೀಯರ ಮಾಹಿತಿಯ ಪ್ರಕಾರ, ತಾಯಿ ತಮ್ಮ ಮಗನೊಂದಿಗೆ ಜಾನುವಾರುಗಳಿಗೆ ಮೇವು ತರುವುದಕ್ಕೆ ಹೋದಿದ್ದರು. ಮಗ ಆಟವಾಡುತ್ತಿದ್ದಾಗ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋಗಿ ತಾಯಿ ಕೂಡ ಹೊಂಡಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದೇಹಗಳನ್ನು ಹೊರತೆಗೆದಿದ್ದು, ಮುಂದಿನ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.