ಮೈಸೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊ*ಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃ*ತನ ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್ ಎಂಬುವವರನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಸಂಬಂಧ, ಯೂಟ್ಯೂಬ್ ನೋಡಿ ಕೊ*ಲೆ ಸ್ಕೆಚ್:
ಮೃತನ ಪತ್ನಿ ಪವಿತ್ರಾ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿ ನಡುವೆ ನಿರಂತರ ಕಲಹ ಏರ್ಪಟ್ಟಿತ್ತು. ಹೇಗಾದರೂ ಮಾಡಿ ಪತಿಯನ್ನು ಮುಗಿಸಲು ನಿರ್ಧರಿಸಿದ ಪವಿತ್ರಾ, ಯೂಟ್ಯೂಬ್‌ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಕೊ*ಲೆಗೆ ಸಂಚು ರೂಪಿಸಿದ್ದಳು. ಅಕ್ಟೋಬರ್ 16ರಂದು ರಾತ್ರಿ ಕುಡಿದು ಮನೆಗೆ ಬಂದ ರಾಮಪ್ರಸಾದ್‌ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಆತ ಸಾಯದಿದ್ದಾಗ, ಪ್ರಿಯಕರ ಸುನೀಲ್‌ನ ಸಹಾಯದಿಂದ ಕತ್ತು ಹಿಸುಕಿ ಹ*ತ್ಯೆ ಮಾಡಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಕೊ*ಲೆ ಬಳಿಕ ಆತನ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರಾ, ರಾಮಪ್ರಸಾದ್ ಮೊಸರು ತಿಂದು ಮಲಗಿದ್ದು ಎದ್ದೇಳುತ್ತಿಲ್ಲ ಎಂದು ಸುಳ್ಳು ಕತೆ ಕಟ್ಟಿದ್ದಾಳೆ. ಆಕೆಯ ಮಾತನ್ನು ನಂಬಿದ ಸಂಬಂಧಿಕರು ಶ*ವದ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.
ಆದರೆ, ಅದೇ ರಾತ್ರಿ ಪವಿತ್ರಾ ಪ್ರಿಯಕರ ಸುನೀಲ್ ಮನೆಗೆ ಹೋಗಿದ್ದ ಬಗ್ಗೆ ಸ್ಥಳೀಯರು ಚಂದ್ರಹಾಸಗೆ ಮಾಹಿತಿ ನೀಡಿದ್ದರು. ಇದರಿಂದ ಸಂಶಯಗೊಂಡು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊ*ಲೆ ರಹಸ್ಯ ಬಯಲಾಗಿದ್ದು, ಇಬ್ಬರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
