S Shorts

ರಾಜ್ಯದಲ್ಲಿ ಸದ್ಯಕ್ಕಿಲ್ಲ CM ಬದಲಾವಣೆ: ಸಿದ್ದರಾಮಯ್ಯ Safe, ಆದರೆ ಹಾಲಿ ಸಚಿವರಿಗೆ ಶುರುವಾಯ್ತು ನಡುಕ!

ರಾಜ್ಯದಲ್ಲಿ ಸದ್ಯಕ್ಕಿಲ್ಲ CM ಬದಲಾವಣೆ: ಸಿದ್ದರಾಮಯ್ಯ Safe, ಆದರೆ ಹಾಲಿ ಸಚಿವರಿಗೆ ಶುರುವಾಯ್ತು ನಡುಕ!
Author: Sagaradventure
Posted By: Sagaradventure
Updated: May 1, 2026 | 2:16 PM

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಕುರಿತು ನಡೆಯುತ್ತಿದ್ದ ಬಿರುಸಿನ ಚರ್ಚೆಗಳಿಗೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒಂದೇ ಒಂದು ಹೇಳಿಕೆ ಬ್ರೇಕ್ ಹಾಕಿದೆ.

“ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಯಿಲ್ಲ” ಎಂಬ ಖರ್ಗೆ ಅವರ ಸ್ಪಷ್ಟನೆ ಸಿಎಂ ಸಿದ್ದರಾಮಯ್ಯ ಅವರಿಗೆ ಆನೆಬಲ ತಂದುಕೊಟ್ಟಿದ್ದು, ಸದ್ಯಕ್ಕಂತೂ ಅವರ ಸ್ಥಾನ ಸಂಪೂರ್ಣ ಸೇಫ್ ಆಗಿದೆ. ಆದರೆ, ಸಿಎಂ ನಿರಾಳರಾಗುತ್ತಿದ್ದಂತೆಯೇ ಹಾಲಿ ಸಚಿವರಿಗೆ ಮಾತ್ರ ಕ್ಯಾಬಿನೆಟ್ ಸರ್ಜರಿಯ ಭೀತಿ ಶುರುವಾಗಿದೆ!

ಹೌದು, ಸಿಎಂ ಬದಲಾವಣೆ ಇಲ್ಲ ಎಂಬ ಗುಡ್ ನ್ಯೂಸ್ ಬೆನ್ನಲ್ಲೇ ಸಂಪುಟ ಪುನಾರಚನೆಯ (Cabinet Reshuffle) ಬಗ್ಗೆ ಸಿಎಂ ಸಿದ್ದರಾಮಯ್ಯ ಚಿತ್ತ ಹರಿಸಿದ್ದಾರೆ. ಕ್ಯಾಬಿನೆಟ್ ರಿಶಫಲ್ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವರಿಗೆ ಆತಂಕವೇಕೆ? 10 ರಿಂದ 18 ವಿಕೆಟ್ ಪತನ?

ಸಂಪುಟ ಸರ್ಜರಿಯ ಚರ್ಚೆ ತೀವ್ರಗೊಳ್ಳುತ್ತಿದ್ದಂತೆಯೇ, ನಿರೀಕ್ಷಿತ ಸಾಧನೆ ಮಾಡದ 10 ರಿಂದ 18 ಹಾಲಿ ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಇದರಿಂದಾಗಿ ಹೇಗಾದರೂ ಮಾಡಿ ಸಚಿವ ಸ್ಥಾನ ಉಳಿಸಿಕೊಳ್ಳಲು ಹಿರಿಯ ಸಚಿವರು ಹೈಕಮಾಂಡ್ ಮಟ್ಟದಲ್ಲಿ ಭಾರಿ ಕಸರತ್ತು ಆರಂಭಿಸಿದ್ದಾರೆ. ಇನ್ನೊಂದೆಡೆ, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ತಮಗೊಂದು ಅವಕಾಶ ಕೊಡಿ ಎಂದು ನಾಯಕರ ದುಂಬಾಲು ಬಿದ್ದಿದ್ದಾರೆ.

ಸಂಪುಟಕ್ಕೆ ಯಾರು ಇನ್? ಸಂಭಾವ್ಯರ ಪಟ್ಟಿ ಇಲ್ಲಿದೆ:

ಕ್ಯಾಬಿನೆಟ್ ರೇಸ್‌ನಲ್ಲಿರುವ ಹಾಗೂ ಹೊಸದಾಗಿ ಸಂಪುಟ ಸೇರಲು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಶಾಸಕರ ಹೆಸರುಗಳ ವಿವರ ಇಲ್ಲಿದೆ:
*ಪ್ರದೀಪ್ ಈಶ್ವರ್ – ಚಿಕ್ಕಬಳ್ಳಾಪುರ
*ಯು.ಟಿ. ಖಾದರ್ – ಮಂಗಳೂರು
*ಬಸವರಾಜ ರಾಯರೆಡ್ಡಿ – ಯಲಬುರ್ಗಾ
*ಕೆ.ಎನ್. ರಾಜಣ್ಣ – ಮಧುಗಿರಿ
*ಬಿ. ನಾಗೇಂದ್ರ – ಬಳ್ಳಾರಿ ಗ್ರಾಮಾಂತರ
*ಬಿ. ಜಯಚಂದ್ರ – ಶಿರಾ
*ಅಶೋಕ್ ಪಟ್ಟಣ್ – ರಾಮದುರ್ಗ
*ಎಸ್. ಎನ್. ಸುಬ್ಬಾರೆಡ್ಡಿ – ಬಾಗೇಪಲ್ಲಿ
*ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ
*ಹಂಪನಗೌಡ ಬಾದರ್ಲಿ – ಸಿಂಧನೂರು
*ಡಿ.ಜಿ. ಶಾಂತನಗೌಡ – ಹೊನ್ನಾಳಿ
*ಬಸವರಾಜ್ ಶಿವಣ್ಣನವರ್ – ಬ್ಯಾಡಗಿ
*ಪ್ರಸಾದ್ ಅಬ್ಬಯ್ಯ – ಹುಬ್ಬಳ್ಳಿ-ಧಾರವಾಡ ಪೂರ್ವ
*ಯು.ಬಿ. ಬಣಕಾರ್ – ಹಿರೇಕೆರೂರು
*ಜಿ.ಎಸ್. ಪಾಟೀಲ್ – ರೋಣ
*ಯಶವಂತರಾಯಗೌಡ ಪಾಟೀಲ್ – ಇಂಡಿ
*ಕೆ. ಷಡಕ್ಷರಿ – ತಿಪಟೂರು
*ಎಸ್.ಎನ್. ನಾರಾಯಣಸ್ವಾಮಿ – ಬಂಗಾರಪೇಟೆ