S Shorts

ಸಂಪುಟ ಕಸರತ್ತಿಗೆ ಸದ್ಯಕ್ಕಿಲ್ಲ ಮುಕ್ತಿ: ರಾಹುಲ್ ಗಾಂಧಿ ವಾಪಸಾದ ಬಳಿಕವೇ ಫೈನಲ್ ಲಿಸ್ಟ್!

ಸಂಪುಟ ಕಸರತ್ತಿಗೆ ಸದ್ಯಕ್ಕಿಲ್ಲ ಮುಕ್ತಿ: ರಾಹುಲ್ ಗಾಂಧಿ ವಾಪಸಾದ ಬಳಿಕವೇ ಫೈನಲ್ ಲಿಸ್ಟ್!
Author: Meghana Gowda
Posted By: Meghana Gowda
Updated: Jun 24, 2026 | 11:05 AM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ (Cabinet Expansion) ಪ್ರಕ್ರಿಯೆ ಮತ್ತೆ ನನೆಗುದಿಗೆ ಬಿದ್ದಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ತೀವ್ರ ನಿರಾಸೆಯಾಗಿದೆ. ಮೂಲಗಳ ಪ್ರಕಾರ, ಜುಲೈ 2ರವರೆಗೆ ರಾಜ್ಯ ಸಚಿವ ಸಂಪುಟ ಕಸರತ್ತು ಬಹುತೇಕ ಅನುಮಾನ ಎನ್ನಲಾಗಿದೆ.

ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಸ್ತುತ ವಿದೇಶ ಪ್ರವಾಸದಲ್ಲಿದ್ದು, ಜುಲೈ 2ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಹೈಕಮಾಂಡ್‌ನ ಪ್ರಮುಖ ನಾಯಕರ ಗೈರುಹಾಜರಿಯ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ತೀರ್ಮಾನಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ದೆಹಲಿಗೆ ಮರಳಿದ ಮರುದಿನವೇ, ಅಂದರೆ ಜುಲೈ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM & DK Shivakumar) ಅವರು ಜಂಟಿಯಾಗಿ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಅಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸಿ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ ಎನ್ನಲಾಗಿದೆ.